alex Certify ಬೇಸಿಗೆಯಲ್ಲಿ ಈ ಕಾರಣಕ್ಕೆ ಕುಡಿಯಬೇಕು ಪುದೀನಾ ಟೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಈ ಕಾರಣಕ್ಕೆ ಕುಡಿಯಬೇಕು ಪುದೀನಾ ಟೀ

ಬೇಸಿಗೆಯಲ್ಲಿ ಕೆಲವರು ಚಹಾ ಕುಡಿಯಲು ಇಷ್ಟಪಡುವುದಿಲ್ಲ. ತಂಪು ಪಾನೀಯ ಕುಡಿಯುವುದೇ ಉತ್ತಮ ಎಂದು ಭಾವಿಸ್ತಾರೆ. ಎಂಥಾ ಬಿರು ಬೇಸಿಗೆಯಾಗಿದ್ದರೂ ನೀವು ಚಹಾದಿಂದ ದೂರ ಓಡುವ ಅಗತ್ಯವಿಲ್ಲ. ಮಾಮೂಲಿ ಚಹಾದ ಬದಲು ಈ ಸಮಯದಲ್ಲಿ ಪುದೀನಾ ಚಹಾವನ್ನು ಸೇವಿಸಿ. ಯಾಕಂದ್ರೆ ಇದು ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತದೆ. ಇದರಿಂದ ಬಳಲಿಕೆ ಕೂಡ ಕಡಿಮೆಯಾಗುತ್ತದೆ.

ಪುದೀನಾ ಸೊಪ್ಪಿನಲ್ಲಿ ವಿಟಮಿನ್-ಎ, ವಿಟಮಿನ್-ಸಿ ಮತ್ತು ಬಿ-ಕಾಂಪ್ಲೆಕ್ಸ್, ಫಾಸ್ಫರಸ್, ಕ್ಯಾಲ್ಸಿಯಂ ಇದೆ. ಪುದೀನಾ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ನಮ್ಮ ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ. ಮೆದುಳಿನ ಆರೋಗ್ಯಕ್ಕೂ ಇದು ಪ್ರಯೋಜನಕಾರಿ.

ಬೇಸಿಗೆಯಲ್ಲಿ ತಲೆನೋವಿನ ಸಮಸ್ಯೆ ಹೆಚ್ಚಾಗಿರುತ್ತದೆ. ನೀವು ಈ ಪುದೀನಾ ಚಹಾವನ್ನು ಸೇವಿಸಿದರೆ ತಲೆನೋವು ದೂರವಾಗುತ್ತದೆ. ಆಯಾಸ ಮತ್ತು ದೌರ್ಬಲ್ಯ ಕೂಡ ಇರುವುದಿಲ್ಲ. ತೂಕವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿರುವವರು ಈ ಚಹಾವನ್ನು  ಸೇವಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಪುದೀನಾದಲ್ಲಿನ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿರುವುದರಿಂದ ಇದು ತೂಕ ನಷ್ಟಕ್ಕೆ ಸಹಕರಿಸುತ್ತದೆ. ಪುದೀನಾ ಚಹಾ ಮಾಡಲು 6-7 ಪುದೀನಾ ಎಲೆಗಳನ್ನು ತೊಳೆದು ಸ್ವಚ್ಛಗೊಳಿಸಿ. ನಂತರ ಒಂದು ಗ್ಲಾಸ್‌ ನೀರಿಗೆ ಈ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಸ್ಟವ್‌ ಆಫ್‌ ಮಾಡಿ ಮುಚ್ಚಡಿ. 5 ನಿಮಿಷದ ಬಳಿಕ ಅದನ್ನು ಫಿಲ್ಟರ್‌ ಮಾಡಿ ಕುಡಿಯಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...