ಬೇಸಿಗೆ ಕಾಲದಲ್ಲಿ ಮೊಸರು ಮಜ್ಜಿಗೆ ಸೇರಿಸಿಕೊಂಡು ಅಡುಗೆ ಮಾಡುವುದರಿಂದ ದೇಹಕ್ಕೆ ತಂಪು. ಇಲ್ಲಿ ಸುಲಭವಾಗಿ ಕೊತ್ತಂಬರಿ ಸೊಪ್ಪು ಬಳಸಿ ತಂಬುಳಿ ಮಾಡುವ ವಿಧಾನದ ಬಗ್ಗೆ ತಿಳಿಸಿ ಕೊಡಲಾಗಿದೆ. ಒಮ್ಮೆ ನಿಮ್ಮ ಮನೆಯಲ್ಲಿ ಮಾಡಿ ರುಚಿ ನೋಡಿ. ದೇಹಕ್ಕೂ ಒಳ್ಳೆಯದು.
ಒಂದು ಮಿಕ್ಸಿ ಜಾರಿಗೆ ಸ್ವಲ್ಪ ಕೊತ್ತಂಬರಿ ಸೊಪ್ಪು, 2 ಹಸಿಮೆಣಸು ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ.
ನಂತರ ಇದಕ್ಕೆ 3 ಟೇಬಲ್ ಸ್ಪೂನ್ ನಷ್ಟು ಮೊಸರು ಸೇರಿಸಿ. ಆಮೇಲೆ ¼ ಕಪ್ ನಷ್ಟು ತೆಂಗಿನಕಾಯಿ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಆಮೇಲೆ ಒಂದು ಒಗ್ಗರಣೆ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಜೀರಿಗೆ ಸೇರಿಸಿ, ಚಿಟಿಕೆ ಇಂಗು, 5 ಎಸಳು ಕರಿಬೇವು ಹಾಕಿ ಈ ಒಗ್ಗರಣೆಯನ್ನು ತಂಬುಳ್ಳಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.