ಕೂದಲು ಉದುರುವ ಸಮಸ್ಯೆಯಿಂದ ಬಳಲದವರಿಲ್ಲ. ಯಾವ ಶ್ಯಾಂಪು ಹಾಕಿದರೂ ಕೂದಲು ಉದುರುವುದು ನಿಲ್ಲುವುದಿಲ್ಲ ಎಂದು ದೂರುತ್ತಿರುತ್ತಾರೆ. ಈ ಸಮಸ್ಯೆ ನಿವಾರಣೆಗೆ ಅಪರೂಪದ ಮನೆ ಮದ್ದಿದೆ. ಅದ್ಯಾವುದು ನಿಮಗೆ ಗೊತ್ತೇ…?
ಎರಡು ಲೋಟ ನೀರಿಗೆ 15 ಕಹಿ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಮತ್ತೆ ಇದರೊಂದಿಗೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿಕೊಳ್ಳಿ. ಎರಡು ಲೋಟ, ಒಂದು ಲೋಟದವರೆಗೆ ಇಂಗಲಿ. ಈರುಳ್ಳಿಯಲ್ಲಿರುವ ಸಾರಜನಕ ನಿಮ್ಮ ಕೂದಲನ್ನು ಉದ್ದಗೆ ಬೆಳೆಯುವಂತೆ ಮಾಡುತ್ತದೆ, ಬೇವು ತಲೆ ಹೊಟ್ಟು ನಿವಾರಕವಾಗಿದೆ.
ನೀರು ತಣ್ಣಗಾದ ಬಳಿಕ ಸ್ಪ್ರೇ ಬಾಟಲ್ ಗೆ ಹಾಕಿ ನಿಮ್ಮ ಕೂದಲಿನ ಬುಡದಿಂದ ತುದಿ ತನಕ ಸ್ಪ್ರೇ ಮಾಡಿ. ಇಲ್ಲವೇ ಹತ್ತಿ ಬಟ್ಟೆಯಿಂದ ನಿಮ್ಮ ತಲೆಗೆ ಒತ್ತಿ ಹಾಕಿಕೊಳ್ಳಬಹುದು. ಬಳಿಕ 15 ನಿಮಿಷ ಮೃದುವಾಗಿ ಮಸಾಜ್ ಮಾಡಿ. ಒಂದು ಗಂಟೆ ಹೊತ್ತು ಒಣಗಲು ಬಿಡಿ.
ಬಳಿಕ ನೀವು ಸದಾ ಬಳಸುವ ಶಾಂಪೂವಿನಿಂದ ಸ್ನಾನ ಮಾಡಿ. ಇದರಿಂದ ತಲೆಯಲ್ಲಿರುವ ಈರುಳ್ಳಿ ವಾಸನೆಯೂ ದೂರವಾಗುತ್ತದೆ. ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುವುದಿಲ್ಲ. ದೃಢವಾದ, ಉದ್ದನೆಯ ಕೂದಲು ಪಡೆಯಲು ವಾರಕ್ಕೊಮ್ಮೆ ಇದನ್ನು ಪುನರಾವರ್ತಿಸಿ.