ಪೂರ್ತಿ ದಿನ ಕೆಲಸ ಮಾಡುವುದ್ರಿಂದ ತಲೆನೋವು, ಕೀಲು ನೋವು, ಸೊಂಟ ನೋವು ಸೇರಿದಂತೆ ಅನೇಕ ನೋವುಗಳು ಕಾಣಿಸಿಕೊಳ್ಳುತ್ತವೆ. ತಕ್ಷಣ ನೋವು ನಿವಾರಣೆಯಾಗಬೇಕೆಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ನೋವು ನಿವಾರಕ ಮಾತ್ರೆಗಳ ಮೊರೆ ಹೋಗ್ತಾರೆ ಜನರು. ಮಾತ್ರೆ ಬದಲು ಮನೆ ಮದ್ದಿನ ಮೂಲಕವೇ ಎಲ್ಲ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
ಬೇವಿನ ಎಲೆ ಎಲ್ಲರ ಮನೆಯಲ್ಲೂ ಇರುತ್ತದೆ. ಬೇವಿನ ಎಲೆ ಬಳಕೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಈ ಎಲೆಯಲ್ಲಿ ಎಲ್ಲ ನೋವುಗಳನ್ನು ನಿವಾರಿಸುವ ಶಕ್ತಿಯಿದೆ. ಬೇವಿನ ಎಲೆಯಲ್ಲಿ ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣದ ಪ್ರಮಾಣವು ತುಂಬಾ ಹೆಚ್ಚಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಗಳ ವಿರುದ್ಧ ದೇಹವನ್ನು ರಕ್ಷಿಸುವ ಶಕ್ತಿ ಇದಕ್ಕಿದೆ.
ನೋವಿನ ಔಷಧಿ ತಯಾರಿಸುವ ವಿಧಾನಕ್ಕೆ ಬೇಕಾಗುವ ವಸ್ತು. ಮೂರು ಬೇವಿನ ಎಲೆ, 2 ನಿಂಬು, ಅರ್ಧ ಲೀಟರ್ ನೀರು. ಒಂದು ಪಾತ್ರೆಗೆ ಮೂರು ಬೇವಿನ ಎಲೆ ಹಾಗೂ ನಿಂಬೆ ಹಣ್ಣನ್ನು ಕತ್ತರಿಸಿ. ಅರ್ಧ ಲೀಟರ್ ನೀರಿನಲ್ಲಿ ಬೇವಿನ ಎಲೆ ಹಾಗೂ ನಿಂಬೆ ಹಣ್ಣನ್ನು ಹಾಕಿ ಕುದಿಸಿ. ನೀರು ತಣ್ಣಗಾದ ಮೇಲೆ ಅದನ್ನು ಕುಡಿಯಿರಿ. ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿ ಇದಕ್ಕಿದೆ.
ದಾಲ್ಚಿನಿ, ಲವಂಗದ ಜೊತೆ ಬೇವಿನ ಎಲೆಯನ್ನು ಹಾಕಿ ಲೇಪ ಮಾಡಿ ನೋವಾದ ಜಾಗಕ್ಕೆ ಹಚ್ಚಿಕೊಳ್ಳಿ. ಇದ್ರಿಂದ ನೋವು ನಿವಾರಣೆಯಾಗುತ್ತದೆ.