ಮನೆಯಲ್ಲಿ ತಿಂಗಳಿಗೆ ಆಗುವಷ್ಟು ದಿನಸಿ ತಂದಿಟ್ಟುಕೊಳ್ಳುತ್ತೇವೆ. ಎಷ್ಟೇ ಬಿಗಿಯಾದ ಡಬ್ಬದಲ್ಲಿ ಬೇಳೆ, ಕಾಳು, ಸಕ್ಕರೆ ಇವನ್ನೆಲ್ಲಾ ಶೇಖರಿಸಿಟ್ಟರೂ, ಹುಳು, ಇರುವೆಗಳು ಡಬ್ಬದೊಳಗೆ ಹೋಗುತ್ತವೆ ಎಂದು ಚಿಂತೆ ಮಾಡುತ್ತಿದ್ದರಾ…? ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್ ಗಳು.
ಸಕ್ಕರೆ ಡಬ್ಬ ಇಟ್ಟಲ್ಲಿ ಇರುವೆಗಳ ಕಾಟ ಇದ್ದೆ ಇರುತ್ತದೆ. ಇದನ್ನು ಸುಲಭವಾಗಿ ನಿವಾರಿಸಿಕೊಳ್ಳಲು ಸಕ್ಕರೆ ಡಬ್ಬಕ್ಕೆ 4 ಲವಂಗ ಹಾಕಿ ಇಡಿ. ಇದರಿಂದ ಇರುವೆಗಳು ಮುತ್ತಿಕೊಳ್ಳುವುದಿಲ್ಲ.
ಇನ್ನು ಧನಿಯಾ ಪುಡಿ, ಖಾರದಪುಡಿ, ಗರಂ ಮಸಾಲ ಹಾಕಿಟ್ಟುಕೊಂಡ ಡಬ್ಬಕ್ಕೂ ಹುಳುಗಳು ಬರುತ್ತದೆ. ಹಾಗಾಗಿ ಈ ಮಸಾಲೆಪುಡಿಗೆ ಸ್ವಲ್ಪ ಪುಡಿ ಉಪ್ಪುನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಹುಳುಗಳು ಬರುವುದಿಲ್ಲ. ಅಡುಗೆ ಮಾಡುವಾಗ ಉಪ್ಪು ಸ್ವಲ್ಪ ಕಡಿಮೆ ಹಾಕಿ.
ಇನ್ನು ಗೋಧಿ ಹಿಟ್ಟು ಶೇಖರಿಸಿಡುವ ಡಬ್ಬ, ಅಕ್ಕಿ ಡಬ್ಬಕ್ಕೆ ಬೇವಿನ ಎಲೆಗಳನ್ನು ತೊಳೆದು ನೀರಿನ ಪಸೆ ಆರಿದ ಮೇಲೆ ಇದನ್ನು ಆ ಡಬ್ಬಕ್ಕೆ ಹಾಕಿ. ಇದರಿಂದ ಹುಳುಗಳ ಕಾಟ ನಿವಾರಿಸಿಕೊಳ್ಳಬಹುದು.
ಇನ್ನು ಬೇಳೆಕಾಳುಗಳನ್ನು ತಂದಾಗ ಅದನ್ನು ಬಿಸಿಲಿನಲ್ಲಿ 6 ಗಂಟೆಗಳ ಕಾಲ ಒಣಗಿಸಿ ನಂತರ ಡಬ್ಬವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ನೀರಿನ ಪಸೆ ಇಲ್ಲದಂತೆ ಒರೆಸಿ ಅದರಲ್ಲಿ ಈ ಬೇಳೆಕಾಳುಗಳನ್ನು ತುಂಬಿಸಿಡಿ.