ಯುವಕರನ್ನ ಬಳಸಿಕೊಂಡು ಬೈಕ್ ಗಳನ್ನ ಕಳ್ಳತನ ಮಾಡಿಸ್ತಿದ್ದ ಕಾನ್ ಸ್ಟೇಬಲ್ ಓರ್ವನನ್ನು ಮಾಗಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೊನ್ನಪ್ಪ ಅಲಿಯಾಸ್ ರವಿ ಬಂಧಿತ ಪೊಲೀಸ್ ಕಾನ್ ಸ್ಟೇಬಲ್.
ಬೆಂಗಳೂರು, ಬೆಂಗಳೂರು ಹೊರವಲಯ ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಸ್ಥಳೀಯ ಯುವಕರನ್ನ ಬಳಸಿಕೊಂಡು ಅನೇಕ ಕಡೆ ಬೈಕ್ ಗಳ ಕಳ್ಳತನ ಮಾಡುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್, ಆನಂತರ ಬೈಕ್ ಗಳನ್ನ ಮಾರಾಟ ಮಾಡ್ತಿದ್ದ.
ಅಪ್ರಾಪ್ತರು ಬೈಕ್ ಕಳ್ಳತನ ಮಾಡಿ ಹೊನ್ನಪ್ಪನಿಗೆ ತಂದು ಕೊಡ್ತಿದ್ರು, ಬೈಕ್ ಮಾರಾಟ ಮಾಡಿ ಐದರಿಂದ ಆರು ಸಾವಿರ ಹಣವನ್ನ ಹುಡುಗರಿಗೆ ನೀಡ್ತಿದ್ದ ಕಾನ್ ಸ್ಟೇಬಲ್ ಸಧ್ಯ ಸಿಕ್ಕಿಬಿದ್ದಿದ್ದಾನೆ.
2016ರ ಬ್ಯಾಚ್ ನ ಸಿವಿಲ್ ಕಾನ್ ಸ್ಟೇಬಲ್ ಆಗಿರೊ ಹೊನ್ನಪ್ಪ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಧ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿರೊ ಹೊನ್ನಪ್ಪ, ರಾಜಸ್ಥಾನದ ರಮೇಶ್, ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನ ಬಂಧಿಸಲಾಗಿದೆ. ಬಂಧಿತರಿಂದ 53 ಬೈಕ್ ಗಳನ್ನ ವಶಕ್ಕೆ ಪಡೆದಿರೋ ಮಾಗಡಿ ರೋಡ್ ಪೊಲೀಸ್ರು ವಿಚಾರಣೆ ಮುಂದುವರೆಸಿದ್ದಾರೆ.