alex Certify ಬೇರೆ ಬಟ್ಟೆ ಹಾಕಿದ್ರೆ ರೇಪ್ ಆಗುತ್ತಾ…? ಜಮೀರ್ ಅಹ್ಮದ್ ಅವರದ್ದು ಕೆಟ್ಟ ಸ್ಟೇಟ್ಮೆಂಟ್ ಎಂದ ಗೃಹ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇರೆ ಬಟ್ಟೆ ಹಾಕಿದ್ರೆ ರೇಪ್ ಆಗುತ್ತಾ…? ಜಮೀರ್ ಅಹ್ಮದ್ ಅವರದ್ದು ಕೆಟ್ಟ ಸ್ಟೇಟ್ಮೆಂಟ್ ಎಂದ ಗೃಹ ಸಚಿವ

ಬೆಂಗಳೂರು: ಹಿಜಾಬ್ ಹಾಕಿದರೆ ರೇಪ್ ಘಟನೆಗಳು ಕಡಿಮೆಯಾಗುತ್ತದೆ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಹಿಜಾಬ್ ಬಿಟ್ಟು ಬೇರೆ ಬಟ್ಟೆ ಹಾಕಿದರೆ ರೇಪ್ ಆಗುತ್ತಾ ? ಇದೆಂತಹ ಕೆಟ್ಟ ಹೇಳಿಕೆ ಎಂದು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಹಿಜಾಬ್ ಹಾಕಿದರೆ ರೇಪ್ ಆಗಲ್ಲ ಎಂಬ ಜಮೀರ್ ಅಹ್ಮದ್ ಹೇಳಿಕೆ ಅತ್ಯಂತ ಕೆಟ್ಟ ಸ್ಟೇಟ್ಮೆಂಟ್. ಹಾಗಿದ್ರೆ ಹಿಂದೂ ಹುಡುಗಿಯರು ಬೇರೆ ಬೇರೆ ಬಟ್ಟೆ ಹಾಕುತ್ತಾರೆ. ಬೇರೆ ಬಟ್ಟೆ ಹಾಕಿದರೆ ರೇಪ್ ಆಗುತ್ತಾ ? ಜಮೀರ್ ತಮ್ಮ ಮನಸ್ಸಿಗೆ ಬಂದ ಹಾಗೆ ಮಾತನಾಡಿದ್ದಾರೆ. ಸ್ವಲ್ಪ ವಿಶಾಲವಾಗಿ ಯೋಚನೆ ಮಾಡಲಿ ಎಂದು ಹೇಳಿದರು.

ಹೈಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು: ಆರಗ ಜ್ಞಾನೇಂದ್ರ

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲರೂ ಹೈಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ. ಇಂದಿನಿಂದ ಪ್ರೌಢಶಾಲೆಗಳು ಆರಂಭವಾಗಿವೆ. ಬುಧವಾರದವರೆಗೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕಾಲೇಜು ಪುನರಾರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಇನ್ನು ಪೋಷಕರು ಭಯಪಡುವ ಅಗತ್ಯವಿಲ್ಲ. ಶಾಲೆಗಳ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆಡಳಿತ ಮಂಡಳಿ ತೆಗೆದುಕೊಂಡ ಕ್ರಮಗಳಿಗೆ ಪೊಲೀಸರು ಬೆಂಬಲವಾಗಿ ಇರುತ್ತಾರೆ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...