
ನಿಮ್ಮ ಗೊರಕೆ ಬೇರೆಯವರ ನಿದ್ರೆ ಹಾಳು ಮಾಡ್ತಿದೆಯಾ? ಉತ್ತರ ಹೌದು ಎಂದಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಆಯಾಸದಿಂದಾಗಿ ಗೊರಕೆ ಬರುತ್ತೆ ಎನ್ನಲಾಗುತ್ತದೆ. ಆದರೆ ಅದು ಹಾಗಲ್ಲ. ಗೊರಕೆಗೆ ಉಸಿರಾಟದ ತೊಂದರೆ ಮುಖ್ಯ ಕಾರಣ. ವ್ಯಕ್ತಿ ಮಲಗಿದಾಗ ಅವನ ಬಾಯಿ ಮತ್ತು ಮೂಗಿನ ಒಳಗಿನಿಂದ ಗಾಳಿ ಸರಿಯಾಗಿ ಓಡಾಡುವುದಿಲ್ಲ. ಇದು ಗೊರಕೆಗೆ ಕಾರಣವಾಗುತ್ತದೆ.
ಗೊರಕೆ ಸಮಸ್ಯೆಗೆ ಉಜ್ಜಯಿ ಪ್ರಾಣಾಯಾಮ ಒಳ್ಳೆಯ ಮದ್ದು, ಈ ಪ್ರಾಣಾಯಾಮದಿಂದ ಬಿಸಿ ಗಾಳಿ ದೇಹ ಪ್ರವೇಶ ಮಾಡುತ್ತದೆ. ಕಲುಷಿತ ಗಾಳಿ ದೇಹದಿಂದ ಹೊರಗೆ ಹೋಗುತ್ತದೆ. ಯೋಗದಲ್ಲಿ ಉಜ್ಜಯಿ ಪ್ರಾಣಾಯಾಮದಿಂದ ಅನೇಕ ರೋಗಗಳನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.
ಉಜ್ಜಯಿ ಪ್ರಾಣಾಯಾಮ ಮಾಡುವುದರಿಂದ ಗೊರಕೆಯ ಸಮಸ್ಯೆ ಕಡಿಮೆಯಾಗುತ್ತದೆ. ಥೈರಾಯ್ಡ್ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿ. ಇದನ್ನು ಮಾಡುವುದರಿಂದ ಕುತ್ತಿಗೆಯಲ್ಲಿರುವ ಪ್ಯಾರಾಥೈರಾಯ್ಡ್ ಗ್ರಂಥಿ ಆರೋಗ್ಯವಾಗಿರುತ್ತದೆ. ಗಂಟಲಿನಿಂದ ಲೋಳೆಯನ್ನು ಇದು ತೆಗೆದು ಹಾಕುತ್ತದೆ. ಶ್ವಾಸಕೋಶದ ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ. ಇದಲ್ಲದೆ, ಇದು ಸೈನಸ್ ನಿಂದ ಬಳಲುವವರಿಗೆ ಪ್ರಯೋಜನಕಾರಿಯಾಗಿದೆ.