ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಅತ್ಯಂತ ಬೇಗನೆ ತೂಕ ಕಳೆದೊಳ್ಳಬೇಕು ಎಂದುಕೊಂಡಿದ್ರೆ ಫ್ರೂಟ್ ಡಯಟ್ ಆಯ್ಕೆ ಮಾಡಿಕೊಳ್ಳೋದು ಉತ್ತಮ. ದೇಹಕ್ಕೆ ಬೇಕಾದ ಫೈಬರ್ ಅಂಶವನ್ನು ಇದು ಪೂರೈಸುತ್ತದೆ. ಆದ್ರೆ ಡಯಟ್ ಗೆ ಯಾವ ಹಣ್ಣು ಸೂಕ್ತ ಎಂಬುದನ್ನು ತಿಳಿದುಕೊಳ್ಳಬೇಕು.
ಬಾಳೆಹಣ್ಣು : ಅತ್ಯಧಿಕ ಪೋಷಕಾಂಶಗಳುಳ್ಳ ಬಾಳೆಹಣ್ಣು ಡಯಟ್ ಗೆ ಸೂಕ್ತ. ಮ್ಯಾಂಗನೀಸ್ ಹಾಗೂ ಪೊಟ್ಯಾಶಿಯಂ ಅಂಶಗಳು ಇದರಲ್ಲಿವೆ. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಬಾಳೆಹಣ್ಣನ್ನು ಓಟ್ ಮೀಲ್ ಬೌಲ್ ಜೊತೆಗೆ ಸೇವಿಸಿ. ಅಥವಾ ಬನಾನಾ ಶೇಕ್ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಲಾಡ್ ನೊಟ್ಟಿಗೂ ತಿನ್ನಬಹುದು.
ಸೇಬು : ಕಡಿಮೆ ಕ್ಯಾಲೋರಿ ಹಾಗೂ ಅತ್ಯಧಿಕ ಫೈಬರ್ ಹೊಂದಿರೋ ಹಣ್ಣು ಇದು. ಆಗಾಗ ಏನಾದ್ರೂ ಕುರುಕಲು ತಿನ್ನಬೇಕೆಂಬ ಚಪಲ ತಡೆದು, ತೂಕ ಇಳಿಸಲು ಇದು ಸಹಾಯ ಮಾಡುತ್ತದೆ. ದಿನವಿಡೀ ಚಟುವಟಿಕೆಯಿಂದಿರಲು ಕೂಡ ಸೇಬು ಸಹಕರಿಸುತ್ತದೆ.
ಅವಕಾಡೊ : ನಿಮ್ಮ ಹಸಿವನ್ನು ಇಂಗಿಸಿ, ಬಾಯಿ ಚಪಲ ಕಡಿಮೆ ಮಾಡುತ್ತದೆ ಈ ಹಣ್ಣು. ಅವಕಾಡೊ ತಿನ್ನುವುದರಿಂದ ತೂಕ ಹೆಚ್ಚಬಹುದೆಂಬ ಭಯವಿಲ್ಲ. ಯಾಕಂದ್ರೆ ಇದರಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾದ ಗುಡ್ ಫ್ಯಾಟ್ ಇದೆ.
ದ್ರಾಕ್ಷಿ : ಪೆಂಡಮಿಕ್ ನಿಂದಾಗಿ ಎಲ್ಲರೂ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವತ್ತ ಗಮನಹರಿಸ್ತಿದ್ದಾರೆ. ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ನಿಮ್ಮ ಇಮ್ಯೂನಿಟಿ ಬೂಸ್ಟರ್ ಆಗಿ ಇದು ಕೆಲಸ ಮಾಡುತ್ತದೆ. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಲು ಸಹಕರಿಸುತ್ತದೆ.
ಬೆರ್ರಿ : ರಾಸ್ ಬೆರ್ರಿ, ಬ್ಲೂ ಬೆರ್ರಿ, ಸ್ಟ್ರಾಬೆರ್ರಿ ಹಣ್ಣುಗಳು ತಿನ್ನಲು ಬಹಳ ರುಚಿಕರ, ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಇವುಗಳಲ್ಲಿ ಆಂಟಿಒಕ್ಸಿಡೆಂಟ್ಸ್ ಹೇರಳವಾಗಿದೆ. ವಿಟಮಿನ್, ಮಿನರಲ್ಸ್ ಕೂಡ ಇದೆ. ಹಾಗಾಗಿ ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ.