ಆರ್ಕ, ನವಣೆ, ಸಾಮೆ, ಊದಲು ಮೊದಲಾದ ಸಿರಿಧಾನ್ಯಗಳನ್ನು ಬಳಸಿ ಮಾಡುವ ಅಡುಗೆಯನ್ನು ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ ಹಪ್ಪಳ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಸಿರಿಧಾನ್ಯದ ಹಿಟ್ಟು, ಮೆಂತೆ, ನೀರು, ಉಪ್ಪು, ಖಾರ, ಕಾಳು ಮೆಣಸಿನ ಪುಡಿ.
ತಯಾರಿಸುವ ವಿಧಾನ:
ಸಿರಿಧಾನ್ಯವೊಂದರ ಹಿಟ್ಟನ್ನು ತೆಗೆದುಕೊಂಡು ಜರಡಿ ಮಾಡಿರಿ. ಈ ಹಿಟ್ಟಿನ ಜೊತೆಯಲ್ಲಿ ಸ್ವಲ್ಪ ಮೆಂತೆಯನ್ನು ಸೇರಿಸಿರಿ. ಒಂದು ಲೀಟರ್ ನೀರಿಗೆ ಹಪ್ಪಳ ಖಾರ ಹಾಗೂ ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು.
ಸಿರಿಧಾನ್ಯದ ಹಿಟ್ಟನ್ನು ಸೇರಿಸಿ, ಗಂಟು ಬಾರದಂತೆ ಮುದ್ದೆಯನ್ನು ಮಾಡಿಕೊಳ್ಳಿ. ಅದನ್ನು ಚೆನ್ನಾಗಿ ನಾದಿರಿ. ಸಣ್ಣ ಉಂಡೆಗಳನ್ನು ಮಾಡಿಕೊಂಡು, ಹಪ್ಪಳ ಮಾಡಿ ಬಿಸಿಲಿನಲ್ಲಿ ಒಣಗಿಸಿರಿ.
ಹೀಗೆ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಹಪ್ಪಳಗಳನ್ನು ಸುಟ್ಟು ತಿನ್ನಬಹುದು. ಇಲ್ಲವೇ ಕರಿದುಕೊಂಡು ತಿನ್ನಬಹುದು.