alex Certify ‘ಬೇಕಿದ್ದರೆ ಪೊರಕೆ ಮೇಲೆ ಕುಳಿತು ಹಾರಾಡಿ’ : ರಾಕೆಟ್​ ಇಂಜಿನ್​ ಪೂರೈಕೆ ಸ್ಥಗಿತಗೊಳಿಸಿ ಅಮೆರಿಕಕ್ಕೆ ರಷ್ಯಾ ಟಾಂಗ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೇಕಿದ್ದರೆ ಪೊರಕೆ ಮೇಲೆ ಕುಳಿತು ಹಾರಾಡಿ’ : ರಾಕೆಟ್​ ಇಂಜಿನ್​ ಪೂರೈಕೆ ಸ್ಥಗಿತಗೊಳಿಸಿ ಅಮೆರಿಕಕ್ಕೆ ರಷ್ಯಾ ಟಾಂಗ್​

ಉಕ್ರೇನ್​ ಹಾಗೂ ರಷ್ಯಾ ನಡುವಿನ ಯುದ್ಧದಲ್ಲಿ ಅಮೆರಿಕದ ನಿಲುವಿಗೆ ಪ್ರತೀಕಾರವಾಗಿ ರಷ್ಯಾವು ಯುಎಸ್​ಗೆ ರಾಕೆಟ್​ ಇಂಜಿನ್​ ಪೂರೈಕೆ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೊಗೊಜಿನ್​ ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಅಮೆರಿಕಕ್ಕೆ ವಿಶ್ವದ ಅತ್ಯುನ್ನತ ಇಂಜಿನ್​ಗಳನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ. ಅಮೆರಿಕದವರು ಬೇಕಿದ್ದರೆ ಪೊರಕೆ ಮೇಲೆ ಕುಳಿತು ಆಕಾಶದಲ್ಲಿ ಹಾರಾಡಲಿ ಎಂದು ರೋಗೋಜಿನ್​ ಹೇಳಿದ್ದಾರೆ.

ರೊಗೋಜಿನ್​ ನೀಡಿರುವ ಮಾಹಿತಿಯ ಪ್ರಕಾರ, ರಷ್ಯಾವು 1990 ರ ದಶಕದಿಂದ ಅಮೆರಿಕಕ್ಕೆ ಒಟ್ಟು 122 RD-180 ಎಂಜಿನ್‌ಗಳನ್ನು ವಿತರಿಸಿದೆ, ಅದರಲ್ಲಿ 98 ಅಟ್ಲಾಸ್ ಉಡಾವಣಾ ವಾಹನಗಳಿಗೆ ಶಕ್ತಿ ನೀಡಲು ಬಳಸಲಾಗಿದೆ.

ಉಕ್ರೇನ್ ಮೇಲಿನ ಪಾಶ್ಚಿಮಾತ್ಯ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಫ್ರೆಂಚ್ ಗಯಾನಾದ ಕೌರೌ ಬಾಹ್ಯಾಕಾಶ ನಿಲ್ದಾಣದಿಂದ ಬಾಹ್ಯಾಕಾಶ ಉಡಾವಣೆಯಲ್ಲಿ ಯುರೋಪ್‌ನೊಂದಿಗೆ ಸಹಕಾರವನ್ನು ಸ್ಥಗಿತಗೊಳಿಸುವುದಾಗಿ ರಷ್ಯಾ ಈ ಹಿಂದೆ ಹೇಳಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...