ಬೇಸಿಗೆ ಬಂತೆಂದರೆ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಬೆವರು ಸಾಲೆ ಎಂದೂ ಕರೆಯಲಾಗುತ್ತದೆ. ಬೇಸಿಗೆ ಬಂತೆಂದರೆ ಈ ಸಮಸ್ಯೆ ಕಂಡು ಬರುತ್ತದೆ.
ಹೆಚ್ಚಾಗಿ ಆಟವಾಡುವ ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಅವರ ತ್ವಚೆ ತುಂಬಾ ಸೂಕ್ಷ್ಮವಾಗಿರುವುದರಿಂದ ಬಿಸಿಲಿನ ತಾಪ ಹೆಚ್ಚಾದಂತೆ ಚರ್ಮದಲ್ಲಿ ಸಣ್ಣ ನೀರಿನ ಗುಳ್ಳೆಗಳು ಮೂಡುತ್ತವೆ. ವಿಪರೀತ ತುರಿಕೆಯ ಪರಿಣಾಮ ತ್ವಚೆ ಉರಿಯುತ್ತದೆ.
ಇದನ್ನು ಕಡಿಮೆ ಮಾಡಲು ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಹೀಗೆ ಮಾಡಿದರೆ ಎರಡರಿಂದ ಮೂರು ದಿನದೊಳಗೆ ಸೆಕೆ ಬೊಕ್ಕೆಗಳು ಕಡಿಮೆಯಾಗುತ್ತವೆ.
ಮುಖ, ಕುತ್ತಿಗೆ, ಬೆನ್ನು, ಹೊಟ್ಟೆ, ಸ್ತನಗಳ ಕೆಳಭಾಗದಲ್ಲಿ, ಹಿಂಭಾಗದಲ್ಲಿ, ಮೊಣಕೈ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಇದಕ್ಕೆ ಅಕ್ಕಿ ತೊಳೆದ ನೀರನ್ನು ಹಚ್ಚಿಕೊಳ್ಳಬೇಕು. ಇದರಿಂದ ಉರಿಯೂ ಕಡಿಮೆಯಾಗುತ್ತದೆ, ಕಜ್ಜಿ ಗಳೂ ಮಾಯವಾಗುತ್ತದೆ.
ಹೆಚ್ಚಿನ ನೀರು ಸೇವನೆಯಿಂದ, ಕಾಟನ್ ಉಡುಪುಗಳನ್ನು ಧರಿಸುವುದರಿಂದ, ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದರಿಂದ ಇದನ್ನು ತಡೆಯಬಹುದು.