ಬೇಸಿಗೆ ಬಂತೆಂದರೆ ಬೆವರುಸಾಲೆಯ ಕಿರಿಕಿರಿ ಇದ್ದಿದ್ದೇ. ಚರ್ಮದ ಮೇಲೆ ಕೆಂಪು ಕೆಂಪಾದ ಚಿಕ್ಕ ಗುಳ್ಳೆಗಳು ಸಿಕ್ಕಾಪಟ್ಟೆ ಕಿರಿಕಿರಿ ಮಾಡುತ್ತದೆ.
ತುರಿಕೆ, ಉರಿಯ ಅನುಭವ ಬೇಸರ ಹುಟ್ಟಿಸುತ್ತದೆ. ಅದರಲ್ಲೂ ಮಕ್ಕಳಿಗೆ ಬೆವರುಸಾಲೆ ಆದರೆ ರಚ್ಚೆ ಹಿಡಿದು ಅಳು ಶುರು ಮಾಡಿಬಿಡುತ್ತಾರೆ. ಹಾಗಾಗಿ ಬೇಸಿಗೆಯಲ್ಲಿ ಚರ್ಮದ ವಿಶೇಷ ಕಾಳಜಿಯ ಅಗತ್ಯ ಇದೆ.
ಬೆವರುಸಾಲೆಯ ತೊಂದರೆಯಿಂದ ಪರಿಹಾರ ಬೇಕೇ ?
ಬೆಚ್ಚನೆಯ ನೀರಿನಿಂದ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ
ಸಡಿಲವಾದ, ಹತ್ತಿ ಬಟ್ಟೆಗಳನ್ನೇ ಹೆಚ್ಚು ಧರಿಸಿ
ರೋಸ್ ವಾಟರ್ ಅಥವಾ ಅಲೋವೆರಾ ಲೋಳೆಯನ್ನು ಬೆವರು ಗುಳ್ಳೆಗಳ ಮೇಲೆ ಹಚ್ಚುತ್ತಿರಿ.
ಮೈಗೆ ಕೊಬ್ಬರಿಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ.