ಮಕ್ಕಳಿಗೆ ಕಫ ಆಗುವುದು ಸರ್ವೇ ಸಾಮಾನ್ಯ. ಅದನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು.
ಬೆಳ್ಳುಳ್ಳಿಯನ್ನು ಬಿಸಿ ಮಾಡಿ ಕೈ ವಸ್ತ್ರದಲ್ಲಿ ಸುತ್ತಿ, ಮಕ್ಕಳ ಎದೆ ಭಾಗದಲ್ಲಿ ಅಂದರೆ ಕಫ ಕಟ್ಟಿ ಉಸಿರಾಟಕ್ಕೆ ತೊಂದರೆ ಆಗುವ ಜಾಗದಲ್ಲಿ ಇಡುವುದರಿಂದ ಕಫ ಕರಗುತ್ತದೆ.
ಬೆಳ್ಳುಳ್ಳಿ ಎಸಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ, ಬಳಿಕ ಸಾಸಿವೆ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಬಾಡಿಸಿ. ಕಂದು ಬಣ್ಣ ಬಂದ ಬಳಿಕ ತುಸು ತಣ್ಣಗಾಗಿಸಿ. ಎದೆ ಭಾಗಕ್ಕೆ ಹಚ್ಚಿ. ರಾತ್ರಿ ಮಲಗುವ ಸಮಯದಲ್ಲಿ ಹಚ್ಚಿ, ಈ ಸಮಯದಲ್ಲಿ ಫ್ಯಾನ್, ಎಸಿ ಬಳಸದಿರಿ.
3 ಬೆಳ್ಳುಳ್ಳಿಯ ಎಸಳನ್ನು ಸರದ ಹಾಗೆ ಅಂದರೆ ದಾರ ತೆಗೆದುಕೊಂಡು ಸೂಜಿಯಲ್ಲಿ ಚುಚ್ಚಿ ದಾರದ ಒಳಗೆ ಹಾಕಿ. ಹೀಗೆ ಬೆಳ್ಳುಳ್ಳಿಯ ಎಸಳನ್ನು ದಾರದಲ್ಲಿ ಸೇರಿಸಿ ಕೊರಳಿಗೆ ಕಟ್ಟಿ. ಇದರಲ್ಲಿ ಬೆಳ್ಳುಳ್ಳಿ ಎದೆ ಭಾಗಕ್ಕೆ ಬರಲಿ.