ಈಗ ಎಲ್ಲರಿಗೂ ಶೀತ, ಕೆಮ್ಮು. ಚಳಿ ಹೆಚ್ಚಾದಂತೆ ನೆಗಡಿ, ಕೆಮ್ಮಿನ ಸಮಸ್ಯೆ ಬಿಡದೆ ಕಾಡಲಾರಂಭಿಸುತ್ತದೆ. ಶೀತದಿಂದ ಅಪಾಯವೇನಿಲ್ಲ, ಆದ್ರೆ ದೇಹಕ್ಕೆ ಕಿರಿಕಿರಿ ಉಂಟಾಗುತ್ತದೆ. ಊಟ ತಿಂಡಿ ಕೂಡ ರುಚಿಸದಂತಾಗುತ್ತದೆ. ನೆಗಡಿ ಹಾಗೂ ಕೆಮ್ಮಿನ ಸಮಸ್ಯೆಗೆ ಬೆಳ್ಳುಳ್ಳಿ ಹೇಳಿ ಮಾಡಿಸಿದಂಥ ಮದ್ದು.
ಯಾಕಂದ್ರೆ ಈ ಖಾಯಿಲೆಗಳ ವಿರುದ್ಧ ಹೋರಾಡಲು ನಿಮ್ಮ ಇಮ್ಯೂನಿಟಿ ಹೆಚ್ಚಿಸಬಲ್ಲ ಆ್ಯಂಟಿಒಕ್ಸಿಡೆಂಟ್ಸ್ ಬೆಳ್ಳುಳ್ಳಿಯಲ್ಲಿವೆ. ಶೀತ ಮತ್ತು ಕೆಮ್ಮಿಗೆ ಕಾರಣವಾಗುವ ವೈರಸ್ ಅನ್ನು ಬೆಳ್ಳುಳ್ಳಿ ಹೊಡೆದೋಡಿಸಬಲ್ಲದು. ನಿಮ್ಮ ನಿತ್ಯದ ಆಹಾರದಲ್ಲೇ ಬೆಳ್ಳುಳ್ಳಿಯನ್ನೂ ಸೇರಿಸಿಕೊಂಡು ಸೇವಿಸಿ.
ಆದ್ರೆ ಬೆಳ್ಳುಳ್ಳಿಯನ್ನು ಅತಿಯಾಗಿ ಬೇಯಿಸಬಾರದು. ಸಣ್ಣ ಉರಿಯಲ್ಲಿ ಅದನ್ನು ಹುರಿಯಿರಿ. ಮೈಕ್ರೋವೇವ್ ನಲ್ಲಿ 45 ಸೆಕೆಂಡ್ ಗಳಿಗಿಂತ ಹೆಚ್ಚು ಕಾಲ ಬೆಳ್ಳುಳ್ಳಿಯನ್ನು ಇಡಬೇಡಿ. ಬೆಳ್ಳುಳ್ಳಿ ಸಿಪ್ಪೆ ಬಿಡಿಸಿದ ನಂತರ 10 ನಿಮಿಷ ಹಾಗೇ ಇಡಿ. ನಂತರ ಬಳಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಪ್ರತಿ ಮೀಲ್ ನಲ್ಲೂ ಒಂದು ಗಡ್ಡೆ ಬೆಳ್ಳುಳ್ಳಿಯನ್ನು ಬಳಸುವುದು ಉತ್ತಮ.