ತಣ್ಣೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದು ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಿ ದೇಹವನ್ನು ಆರೋಗ್ಯವಾಗಿಡುತ್ತದೆ. ಮಾತ್ರವಲ್ಲ ಈ ತಣ್ಣೀರಿನಿಂದ ಹೀಗೆ ಮಾಡಿದರೆ ನಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು.
*ತಣ್ಣೀರು ಚರ್ಮವನ್ನು ರಿಫ್ರೆಶ್ ಮಾಡುತ್ತದೆ. ಮತ್ತು ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಮುಖದಲ್ಲಿ ಮೂಡಿದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಮುಖವನ್ನು ತೊಳೆದರೆ ಚರ್ಮ ಟೈಟ್ ಆಗುತ್ತದೆ.
*ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆದರೆ ಚರ್ಮದ ರಂಧ್ರಗಳು ಮುಚ್ಚುತ್ತವೆ, ಇದರಿಂದ ಧೂಳು, ಕೊಳಕು ಚರ್ಮಕ್ಕೆ ಸೇರಿಕೊಳ್ಳುವುದಿಲ್ಲ. ಇದರಿಂದ ಮುಖ ಕಾಂತಿಯುತವಾಗಿ ಹೊಳೆಯುತ್ತಿರುತ್ತದೆ. ಅಲ್ಲದೇ ಮುಖದಲ್ಲಿರುವ ಹೆಚ್ಚುವರಿ ತೈಲವನ್ನು ಇದು ಸ್ವಚ್ಚಗೊಳಿಸಿ ಒಳಗಿನಿಂದ ತೇವಾಂಶವನ್ನು ಲಾಕ್ ಮಾಡುತ್ತದೆ.
*ಬೆಳಿಗ್ಗೆ ಎದ್ದಾಗ ಚರ್ಮದ ರಂಧ್ರಗಳು ಓಪನ್ ಇರುವುದರಿಂದ ಮುಖ ಊದಿಕೊಂಡಿರುತ್ತದೆ. ಹಾಗಾಗಿ ತಣ್ಣೀರಿನಿಂದ ಮುಖ ತೊಳೆದರೆ ರಂಧ್ರಗಳು ಮುಚ್ಚಿ ಮುಖದ ಊತ ಕಡಿಮೆಯಾಗುತ್ತದೆ.
*ತಣ್ಣೀರು ಸುಟ್ಟ ಚರ್ಮವನ್ನು ಸತ್ತ ಜೀವಕೋಶಗಳಾಗಿ ಪರಿವರ್ತಿಸುತ್ತದೆ. ಆಗ ಸ್ಕ್ರಬ್ ಮಾಡಿದರೆ ಸತ್ತ ಜೀವಕೋಶಗಳು ಮುಖದ ಚರ್ಮದಿಂದ ಬೇರ್ಪಡುತ್ತದೆ. ಇದರಿಂದ ಸನ್ ಟ್ಯಾನ್ ಬಗ್ಗೆ ಚಿಂತಿಸಬೇಕಾಗಿಲ್ಲ.
* ತಣ್ಣೀರಿನಿಂದ ಮುಖ ತೊಳೆದು ಮೇಕಪ್ ಮಾಡಿದರೆ ಚರ್ಮದ ರಂಧ್ರಗಳು ಬಿಗಿಯಾಗಿ ಮೇಕಪ್ ನ್ನು ಹಿಡಿದಿಟ್ಟುಕೊಂಡು ಅದು ಹೆಚ್ಚು ಕಾಲ ಬರುವಂತೆ ಮಾಡುತ್ತದೆ.