ಖರ್ಜೂರವನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಬಹುಶಃ ನಮಗೆಲ್ಲರಿಗೂ ತಿಳಿದಿದೆ. ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6 ಮತ್ತು ಕಬ್ಬಿಣ ಖರ್ಜೂರದಲ್ಲಿ ಸಮೃದ್ಧವಾಗಿದೆ. ಆದರೆ ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ದುಪ್ಪಟ್ಟು ಪ್ರಯೋಜನಗಳನ್ನು ಪಡೆಯಬಹುದು.
ತೂಕ ಕಡಿಮೆಯಾಗುತ್ತದೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿನ್ನುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ತೂಕ ಇಳಿಸುವ ಪ್ರಯತ್ನದಲ್ಲಿರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿಂದರೆ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಪದೇ ಒದೇ ನೀವು ಏನನ್ನಾದರೂ ತಿನ್ನುವುದನ್ನು ತಪ್ಪಿಸಬಹುದು.
ಶಕ್ತಿ ಹೆಚ್ಚುತ್ತದೆ
ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿಂದರೆ ದಿನವಿಡೀ ದೇಹದಲ್ಲಿ ಶಕ್ತಿ ಉಳಿಯುತ್ತದೆ. ವಾಸ್ತವವಾಗಿ ಈ ಸಿಹಿ ಹಣ್ಣು ಕಬ್ಬಿಣದಲ್ಲಿ ಸಮೃದ್ಧವಾಗಿದೆ, ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಯನ್ನು ತುಂಬುತ್ತದೆ.
ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ
ಹೊಟ್ಟೆಯ ಅಸ್ವಸ್ಥತೆಯಿಂದ ತೊಂದರೆಗೊಳಗಾದವರು ಕೂಡ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿನ್ನಬೇಕು. ಅದರಲ್ಲಿರುವ ಫೈಬರ್ ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಇದು ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ.
ಸಿಹಿ ತಿನ್ನುವ ಬಯಕೆ ಕಡಿಮೆಯಾಗುತ್ತದೆ
ಸಾಮಾನ್ಯವಾಗಿ ಎಲ್ಲರೂ ಸಿಹಿ ತಿನಿಸುಗಳನ್ನು ಇಷ್ಟಪಡುತ್ತಾರೆ. ಆದ್ರೆ ಸಕ್ಕರೆಯಿಂದ ಮಾಡಿದ ಸ್ವೀಟ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಬೊಜ್ಜು ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಇದು ಉಂಟುಮಾಡುತ್ತದೆ. ಹಾಗಾಗಿ ಡೇಟ್ಸ್ ನಿಮಗೆ ಉತ್ತಮ ಆಯ್ಕೆ. ಸಿಹಿ ತಿನ್ನಬೇಕೆಂಬ ಆಸೆಯಾದಾಗಲೆಲ್ಲ ಖರ್ಜೂರವನ್ನು ಸೇವಿಸಬಹುದು.