ಬೆಳಿಗ್ಗೆ ಏಳುತ್ತಿದ್ದಂತೆ ಕೆಲ ವಸ್ತುಗಳು ಕಣ್ಣಿಗೆ ಬಿದ್ರೆ ಶುಭ ಎನ್ನಲಾಗುತ್ತದೆ. ಕೆಲ ವಸ್ತುಗಳನ್ನು ಬೆಳಿಗ್ಗೆ ನೋಡಿದ್ರೆ ಆ ದಿನ ಮಂಗಳಕರವಾಗಿರುತ್ತದೆಯಂತೆ. ಶಾಸ್ತ್ರಗಳ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಸುಂದರವಾಗಿ ಅಲಂಕಾರಗೊಂಡ ಸ್ತ್ರೀ ಕಣ್ಣಿಗೆ ಬಿದ್ರೆ ಶುಭಕರ.
ಬೆಳಿಗ್ಗೆ ಮನೆ ಬಾಗಿಲು ತೆಗೆಯುತ್ತಿದ್ದಂತೆ ಕೆಂಪು ಬಟ್ಟೆ ಧರಿಸಿದ ಸುಮಂಗಲಿ ನಿಮ್ಮ ಕಣ್ಣಿಗೆ ಬಿದ್ರೆ ಆ ದಿನ ಲಾಭವಾಗಲಿದೆ ಎಂದರ್ಥ. ದೊಡ್ಡ ಕೆಲಸ ಕೈಗೆ ಸಿಗಲಿದೆ. ದೊಡ್ಡ ಲಾಭವಾಗಲಿದೆ ಎಂದುಕೊಳ್ಳಿ.
ಬೆಳಿಗ್ಗೆ ಎದ್ದ ತಕ್ಷಣ ವೇದ-ಮಂತ್ರಗಳು ಕೇಳಿದ್ರೆ ಅಥವಾ ಮಂತ್ರ ಪಠಿಸುತ್ತಿರುವ ವ್ಯಕ್ತಿ ಕಣ್ಣಿಗೆ ಬಿದ್ರೆ ಆ ದಿನ ಶುಭಕರ. ಮನೆ ಬಾಗಿಲು ತೆರೆಯುತ್ತಿದ್ದಂತೆ ಆಕಳು ಕಣ್ಣಿಗೆ ಬಿದ್ರೆ ಅದು ಕೂಡ ಮಂಗಳಕರ. ಕಣ್ಣು ಬಿಡುತ್ತಿದ್ದಂತೆ ದನದ ಕೂಗು ಕೇಳಿದ್ರೂ ಒಳ್ಳೆಯದು. ಕಪ್ಪು ಆಕಳು ಕಣ್ಣಿಗೆ ಬಿದ್ರೆ ಹೆಚ್ಚು ಶುಭಕರ. ಬೆಳಿಗ್ಗೆ ಅಗ್ನಿಯ ದರ್ಶನವಾದ್ರೂ ಶುಭವೆಂದು ಹೇಳಲಾಗುತ್ತದೆ.