ದಿನದ ಆರಂಭ ಚೆನ್ನಾಗಿದ್ದರೆ ದಿನ ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಅಶುಭ ಘಟನೆ ನಡೆದ್ರೆ ಮನಸ್ಸು ಹಾಳಾಗಿ ಒಂದಿಡೀ ದಿನ ಹಾಳಾಗುತ್ತದೆ. ದಿನದ ಆರಂಭ ಅಶುಭವಾಗಿರಬಾರದು. ಶಾಸ್ತ್ರದಲ್ಲಿ ಕೂಡ ದಿನವನ್ನು ಹೇಗೆ ಶುರು ಮಾಡಬೇಕೆಂದು ಹೇಳಲಾಗಿದೆ.
ಬಹುತೇಕರು ಬೆಳಿಗ್ಗೆ ಎದ್ದ ತಕ್ಷಣ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ತಾರೆ. ಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವುದು ಅಶುಭ. ದಿನ ಶುಭಕರವಾಗಿರಬೇಕೆಂದ್ರೆ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬೇಡಿ.
ವಾಸ್ತು ಪ್ರಕಾರ ಬೆಡ್ ರೂಮಿನಲ್ಲಿ ಕನ್ನಡಿ ಇರಬಾರದು. ರಾತ್ರಿ ಪೂರ್ತಿ ಕನ್ನಡಿಯಲ್ಲಿದ್ದ ನಕಾರಾತ್ಮಕ ಶಕ್ತಿ ನಾವು ಕನ್ನಡಿ ನೋಡ್ತಿದ್ದಂತೆ ನಮಗೆ ಬರುತ್ತದೆ. ಇದ್ರಿಂದ ಮನಸ್ಸು ನಕಾರಾತ್ಮಕ ಚಿಂತನೆ ಮಾಡಲು ಶುರು ಮಾಡುತ್ತದೆ.
ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತ್ರವೇ ಕನ್ನಡಿಯನ್ನು ನೋಡಿ.
ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯೊಂದೇ ಅಲ್ಲ ಪ್ರಾಣಿ ಅದ್ರಲ್ಲೂ ಕ್ರೂರ ಪ್ರಾಣಿ ಅಥವಾ ಅದ್ರ ಫೋಟೋವನ್ನು ನೋಡಬೇಡಿ.
ಮುಳುಗುತ್ತಿರುವ ದೋಣಿ ಫೋಟೋ ಮನೆಯಲ್ಲಿದ್ದರೆ ಅದನ್ನು ಕೂಡ ಬೆಳಿಗ್ಗೆ ನೋಡಬೇಡಿ.
ಬೆಳ್ಳಂಬೆಳಿಗ್ಗೆ ನಕಾರಾತ್ಮಕ ಫೋಟೋ ನೋಡುವುದ್ರಿಂದ ನಮ್ಮ ಮನಸ್ಸು ನಕಾರಾತ್ಮಕ ಚಿಂತನೆ ಮಾಡಲು ಶುರು ಮಾಡುತ್ತದೆ.
ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡ್ತಾರೆ. ಮೊಬೈಲ್ ನಲ್ಲಿ ಕೆಲವೊಮ್ಮೆ ನಕಾರಾತ್ಮಕ ಸಂದೇಶ ಅಥವಾ ಮನಸ್ಸಿಗೆ ನೋವುಂಟು ಮಾಡುವ ಸುದ್ದಿ ಬಂದಿರುತ್ತದೆ. ಹಾಗಾಗಿ ಬೆಳಿಗ್ಗೆ ಮೊಬೈಲ್ ನೋಡಬೇಡಿ.