ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಏನೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ…?
ಬೆಳಿಗ್ಗೆ ಎದ್ದು ಕಾಫಿ, ಚಹಾ ಕುಡಿದರೆ ಮಾತ್ರ ದಿನ ಉಲ್ಲಾಸವಾಗಿರುತ್ತದೆ ಎಂದುಕೊಂಡಿದ್ದೀರಾ, ತಪ್ಪು. ನೀರು ಕುಡಿದರೆ ಮಾತ್ರ ದೇಹವನ್ನು ಸ್ವಸ್ಥವಾಗಿಡಬಹುದು. ಚಯಾಪಚಯ ಕ್ರಿಯೆಯ ವೃದ್ಧಿಗೆ ಇದು ಸಹಕಾರಿ.
ಇದರಿಂದ ಜೀರ್ಣಕ್ರಿಯೆಯೂ ಸುಲಭವಾಗಿ ಅಜೀರ್ಣದಂತ ಸಮಸ್ಯೆಗಳು ಕಾಡುವುದಿಲ್ಲ. ಹೊಟ್ಟೆಯ ತ್ಯಾಜ್ಯಗಳು ಇದರಿಂದ ಹೊರಬೀಳುತ್ತವೆ. ಮೂತ್ರ ವಿಸರ್ಜನೆ ಮೂಲಕ ಈ ಕಶ್ಮಲಗಳು ದೇಹದಿಂದ ಹೊರಹೋಗುತ್ತವೆ.
ನಿರ್ಜಲೀಕರಣದಿಂದ ಉಂಟಾಗುವ ಮೈಗ್ರೇನ್ ಮತ್ತಿತರ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ. ಬೆಳಿಗ್ಗೆ ಎದ್ದಾಕ್ಷಣ ಹಾಗೂ ಇಡೀ ದಿನ ನೀರು ಸೇವಿಸುತ್ತಿರುವುದರಿಂದ ಹೊಟ್ಟೆ ತುಂಬಿದ ಭಾವನೆ ಇರುತ್ತದೆ. ಹಾಗಾಗಿ ತೂಕ ಇಳಿಸಲೂ ಇದು ಸಹಕಾರಿ.
ನಿಮ್ಮ ತ್ವಚೆಯನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ ಮಾತ್ರವಲ್ಲ ಬಾಯಿ ಹಾಗೂ ಹಲ್ಲಿನ ಸಮಸ್ಯೆಯನ್ನು ಪರಿಹರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿ ಶಕ್ತಿ ಹೆಚ್ಚುವಂತೆ ಮಾಡುತ್ತದೆ.