ಸೋರೆ ಕಾಯಿ ಹಾಗೂ ಶುಂಠಿಯನ್ನು ಎಲ್ಲರ ಮನೆಯಲ್ಲಿಯೂ ಬಳಕೆ ಮಾಡ್ತಾರೆ. ಸೋರೆ ಕಾಯಿಯಲ್ಲಿ ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಸೋಡಿಯಂ ಬಹಳಷ್ಟಿರುತ್ತದೆ.
ಸೋರೆಕಾಯಿ ಪಲ್ಯ ಮಾಡಿ ತಿನ್ನುವುದರಿಂದ ಇದರಲ್ಲಿರುವ ಎಲ್ಲ ಪೌಷ್ಠಿಕಾಂಶ ಸಿಗುತ್ತದೆ. ಆದ್ರೆ ಬೆಳಗ್ಗೆ ಎದ್ದ ತಕ್ಷಣ ಶುಂಠಿ ಜೊತೆ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ಅಗತ್ಯ ಪೌಷ್ಠಿಕಾಂಶಗಳು ನಮ್ಮ ದೇಹ ಸೇರುತ್ತವೆ.
ಸೋರೆಕಾಯಿಯನ್ನು ಶುಂಠಿ ಜೊತೆ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ರಕ್ತದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇದಲ್ಲದೆ ಮಧುಮೇಹದಿಂದ ಬಳಲುತ್ತಿರುವವರಿಗೆ ಬಹಳ ಒಳ್ಳೆಯದು.
ಈ ಜ್ಯೂಸ್ ಸೇವನೆ ಮಾಡುವುದರಿಂದ ಚಯಾಪಚಯ ಸರಿಯಾಗಿ ಬೊಜ್ಜನ್ನು ನಿಯಂತ್ರಣಕ್ಕೆ ತರುತ್ತದೆ.
ಸೋರೆ ಹಾಗೂ ಶುಂಠಿ ಮಿಶ್ರಣ ಮಾಡಿದ ಜ್ಯೂಸ್ ಸೇವನೆ ಮಾಡುವುದರಿಂದ ದೇಹದಲ್ಲಿ ಆಮ್ಲ ಪ್ರಮಾಣ ಸರಿಯಾಗಿ ಎಸಿಡಿಟಿ ಸಮಸ್ಯೆಯನ್ನು ತಡೆಯುತ್ತದೆ.
ಕೊಲೆಸ್ಟ್ರಾಲ್ ಮಟ್ಟ ಸರಿಯಾಗಿರುವ ಜೊತೆಗೆ ಹೃದಯ ಸಂಬಂಧಿ ಖಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.
ಬಿಪಿ ನಿಯಂತ್ರಣಕ್ಕೂ ಈ ಜ್ಯೂಸ್ ಬಹಳ ಒಳ್ಳೆಯದು.
ಈ ಜ್ಯೂಸ್ ರಕ್ತವನ್ನು ಶುದ್ಧೀಕರಿಸುತ್ತದೆ. ಇದಲ್ಲದೆ ಚರ್ಮದ ಸಮಸ್ಯೆ ದೂರವಾಗುತ್ತದೆ.