ಕೆಲವೊಂದು ಉತ್ತಮ ಅಭ್ಯಾಸಗಳು ನಮ್ಮ ಜೀವನ ಶೈಲಿಯಲ್ಲಿ ಅದ್ಭುತ ಬದಲಾವಣೆಗಳನ್ನು ತರುತ್ತವೆ. ಜೀರ್ಣಾಂಗ ವ್ಯವಸ್ಥೆ ಸುಧಾರಣೆ, ಕೂದಲು ಮತ್ತು ಚರ್ಮದ ಆರೈಕೆಗೆ ಈ ಅಭ್ಯಾಸಗಳು ಸಹಾಯ ಮಾಡುತ್ತವೆ.
ಬಿದಿರಿನ ಬ್ರಷ್: ಆರೋಗ್ಯವನ್ನು ಸುಧಾರಿಸಲು ನೀವು ಬಯಸಿದರೆ, ಅಕೇಶಿಯ ಅಥವಾ ಇತರ ಮರದಿಂದ ಮಾಡಿದ ಬ್ರಷ್ ಅನ್ನು ಬಳಸಬೇಕು. ಇದು ನೈಸರ್ಗಿಕ ಗುಣಗಳನ್ನು ಹೊಂದಿರುತ್ತದೆ. ಬ್ಯಾಕ್ಟೀರಿಯಾವನ್ನು ತೆಗೆದು ಹಾಕುವ ಮೂಲಕ ಒಸಡುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇವು ಸಂಪೂರ್ಣವಾಗಿ ಜೈವಿಕ ವಿಘಟನೀಯವಾಗಿರುವುದರಿಂದ ಪರಿಸರಕ್ಕೆ ಹಾನಿ ಮಾಡುವುದಿಲ್ಲ.
ಆಯಿಲ್ ಪುಲ್ಲಿಂಗ್: ಈ ಪ್ರಕ್ರಿಯೆಯನ್ನು ಆಯುರ್ವೇದದಲ್ಲಿ ಪ್ರಸಿದ್ಧ ತಂತ್ರವೆಂದು ಪರಿಗಣಿಸಲಾಗಿದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಆಯಿಲ್ ಪುಲ್ಲಿಂಗ್ ಸಹಾಯ ಮಾಡುತ್ತದೆ. ಇದು ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ. ಆಯಿಲ್ ಪುಲ್ಲಿಂಗ್‌ಗೆ ನೀವು ತೆಂಗಿನ ಎಣ್ಣೆ ಮತ್ತು ಆಲಿವ್ ಆಯಿಲ್ ಅನ್ನು ಬಳಸಬಹುದು.
ನಾಲಿಗೆ ಶುದ್ಧೀಕರಣ: ಬೆಳಗ್ಗೆ ಎದ್ದ ತಕ್ಷಣ ಹಲ್ಲು, ನಾಲಿಗೆ ಮತ್ತು ಮುಖವನ್ನು ಸ್ವಚ್ಛಗೊಳಿಸಬೇಕು. ನಾಲಿಗೆ ಸ್ವಚ್ಛವಾಗಿಲ್ಲದೇ ಇದ್ದರೆ ಬಾಯಿಯಿಂದ ದುರ್ವಾಸನೆ ಉಂಟಾಗುತ್ತದೆ. ಏಕೆಂದರೆ ನೀವು ದಿನವಿಡೀ ತಿನ್ನುವ ಆಹಾರ. ಅದರ ವಿಭಿನ್ನ ರುಚಿಯಿಂದಾಗಿ, ಕೊಳಕು, ಬ್ಯಾಕ್ಟೀರಿಯಾ ಮತ್ತು ಸತ್ತ ಜೀವಕೋಶಗಳು ನಾಲಿಗೆಯಲ್ಲಿ ಸಂಗ್ರಹಗೊಳ್ಳುತ್ತವೆ. ಇದರಿಂದಾಗಿ ಬಾಯಿಯಿಂದ ಕೆಟ್ಟ ವಾಸನೆ ಬರುತ್ತದೆ. ಆದ್ದರಿಂದ ಬ್ಯಾಕ್ಟೀರಿಯಾ ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ನಾಲಿಗೆಯನ್ನು ಸ್ವಚ್ಛಗೊಳಿಸಬೇಕು. ಇದರಿಂದ ವಸಡಿಗೆ ಸಂಬಂಧಪಟ್ಟ ರೋಗಗಳನ್ನು ಸಹ ನಿವಾರಿಸಬಹುದು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಬಹುದು.
ನೀರು ಕುಡಿಯುವುದು: ದೇಹವನ್ನು ಡಿಟಾಕ್ಸ್ ಮಾಡಲು ನೀರು ಬೇಕೇ ಬೇಕು. ನೀರು ಕುಡಿಯುವುದರಿಂದ ದೇಹವು ಪೋಷಕಾಂಶಗಳನ್ನು ಪಡೆಯುತ್ತದೆ. ಪೋಷಕಾಂಶಗಳನ್ನು ಸಂಯೋಜಿಸಲು ಇದು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯಬೇಕು. ಇದರಿಂದ ದೇಹದಲ್ಲಿ ತಾಜಾತನದ ಭಾವನೆ ಬರುತ್ತದೆ. ದಿನವಿಡೀ ಶಕ್ತಿಯುತವಾಗಿರಬಹುದು. ನೀವು ಪ್ರತಿದಿನ 8-10 ಗ್ಲಾಸ್ ನೀರನ್ನು ಸೇವಿಸಬೇಕು. ಇದು ಕೂಡ ಬಾಯಿಯ ದುರ್ವಾಸನೆಯನ್ನು ತಡೆಯಲು ಸಹಾಯ ಮಾಡುತ್ತದೆ.