
ನಂಬಿಕೆಯೋ, ಪದ್ಧತಿಯೋ ಗೊತ್ತಿಲ್ಲ, ಆದರೆ ಕೆಲವಷ್ಟು ವಿಚಾರಗಳನ್ನು ನಾವು ಪಾಲಿಸಿಕೊಂಡು ಬರುತ್ತೇವಷ್ಟೇ. ಅವುಗಳಲ್ಲಿ ಬೆಳಗೆದ್ದು ಈ ಕೆಲವು ಸಂಗತಿಗಳನ್ನು ನೋಡಬಾರದು ಎಂಬುದೂ ಒಂದು. ಅವುಗಳು ಯಾವುv
ಮನೆಯ ಗಂಡಸರು ಬೆಳಗೆದ್ದು ಖಾಲಿ ಹಣೆ ಇರುವ ಅಂದರೆ ಕುಂಕುಮ ಇಡದ ಹೆಂಡತಿಯ ಮುಖ ನೋಡಬಾರದಂತೆ. ಅದೇ ರೀತಿ ಮನೆಯ ಕಸಗುಡಿಸುವ ದೃಶ್ಯವನ್ನು ಅಥವಾ ಪೊರಕೆಯನ್ನು ಮನೆಯ ಯಾರೊಬ್ಬರೂ ಬೆಳಗ್ಗೆ ಎದ್ದಾಕ್ಷಣ ನೋಡಬಾರದಂತೆ.
ಹಾಗಿದ್ದರೆ ಏನನ್ನು ನೋಡಬಹುದು. ಹಸುವಿನಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರಂತೆ. ಹಾಗಾಗಿ ಎದ್ದ ಕೂಡಲೆ ದನವನ್ನು ನೋಡುವ ಅವಕಾಶವಿದ್ದರೆ ಮಿಸ್ ಮಾಡಿಕೊಳ್ಳಬೇಡಿ.
ಮನೆಯ ಮುಂದಿರುವ ತುಳಸಿ ಗಿಡವನ್ನು ಕಂಡರೂ ನಿಮ್ಮ ದಿನ ಅದ್ಭುತವಾಗಿರುತ್ತದಂತೆ. ಅದೇ ರೀತಿ ನಿಮ್ಮೆರಡು ಕೈಗಳನ್ನು ತಿಕ್ಕಿ ಮೊದಲು ಕರ ದರ್ಶನ ಮಾಡಿದರೆ ಹಲವು ಪುಣ್ಯಗಳು ನಿಮ್ಮದಾಗುತ್ತವೆ. ಏಕೆಂದರೆ ಕೈಯಲ್ಲಿ ಲಕ್ಷ್ಮೀ, ಗೌರಿ, ಸರಸ್ವತಿಯರು ನೆಲೆಸಿರುತ್ತಾರಂತೆ.