ಬೆಳಿಗ್ಗೆ ಚೆನ್ನಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತೆ ಎಂಬ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ಬೆಳಿಗ್ಗೆ ನಮ್ಮ ಮೂಡ್ ಹಾಳಾದ್ರೆ ಇಡೀ ದಿನ ಮನಸ್ಸು ಅಶಾಂತವಾಗಿರುತ್ತೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಏನು ಮಾಡಬೇಕು ಅನ್ನೋದನ್ನು ವಾಸ್ತು ಶಾಸ್ತ್ರದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಏನು ಮಾಡಬೇಕು, ಬೆಳಿಗ್ಗೆ ತಕ್ಷಣ ಏನು ಮಾಡಬಾರದು ಎಂಬುದನ್ನು ಹೇಳಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ಮಾತ್ರ ನೋಡಬೇಡಿ. ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡೋದು ಅಶುಭ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಬೇರೆಯವರ ಮುಖವನ್ನು ಮಾತ್ರ ನೋಡಬಾರದು. ಬೇರೆಯವರ ಮುಖ ನೋಡಿದ್ರೆ ಅವರ ಪ್ರಭಾವಕ್ಕೆ ನೀವು ಒಳಗಾಗ್ತೀರಾ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ನಿಮ್ಮ ತಂದೆ-ತಾಯಿ ನಿಮ್ಮ ಜೊತೆ ವಾಸವಾಗಿದ್ದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಅವರ ಪಾದ ಮುಟ್ಟಿ ನಮಸ್ಕಾರ ಮಾಡಬೇಕು.
ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಕೈನಲ್ಲಿರುವ ರೇಖೆಗಳನ್ನು ನೋಡಿಕೊಳ್ಳಿ. ಇದ್ರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ನಮ್ಮ ಕೈನಲ್ಲಿ ಲಕ್ಷ್ಮಿ ನೆಲೆಸಿದ್ದು ಬೆಳಗ್ಗೆ ಎದ್ದ ತಕ್ಷಣ ಲಕ್ಷ್ಮಿ ದರ್ಶನ ಪಡೆಯಬೇಕೆಂದು ಶಾಸ್ತ್ರ ಹೇಳುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಮಕ್ಕಳೊಂದಿಗೆ ಕಾಲ ಕಳೆಯಬೇಕು. ಇದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಾಯಾಮ ಮಾಡಿದಲ್ಲಿ ಆರೋಗ್ಯ ವೃದ್ಧಿಯಾಗುತ್ತದೆ.
ಎದ್ದ ತಕ್ಷಣ ಕಾಲನ್ನು ನೆಲಕ್ಕೆ ಇಡಬೇಡಿ. ಮೊದಲು ಭೂತಾಯಿಗೆ ನಮಸ್ಕಾರ ಮಾಡಿ ಕಾಲನ್ನು ಕೆಳಗಿಡಿ.