ಬೆಳಿಗ್ಗೆ ತಿಂಡಿಗೆ ಮನೆಯಲ್ಲಿಯೇ ಮಾಡಿ ಸವಿಯಿರಿ ರುಚಿಕರವಾದ ಕ್ಯಾಪ್ಸಿಕಂ ಬಾತ್. ಮಾಡುವುದಕ್ಕೆ ಕೂಡ ಸುಲಭವಿದೆ. ಒಮ್ಮೆ ಟ್ರೈ ಮಾಡಿ ನೋಡಿ.
ಒಂದು ಬಾಣಲೆಗೆ 4 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಎಣ್ಣೆ ಬಿಸಿಯಾಗುತ್ತಲೇ ½ ಟೀ ಸ್ಪೂನ್ ಜೀರಿಗೆ, ¼ ಟೀ ಸ್ಪೂನ್ ಇಂಗು, ¼ ಟೀ ಸ್ಪೂನ್ ನಷ್ಟು ಸಾಸಿವೆ ಹಾಕಿ. ನಂತರ ಸ್ವಲ್ಪ ಕರಿಬೇವು, 1 ಬ್ಯಾಡಗಿ ಮೆಣಸನ್ನು ತುಂಡು ಮಾಡಿಹಾಕಿ. ನಂತರ 2 ಹದ ಗಾತ್ರದ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ¼ ಟೀ ಸ್ಪೂನ್ ಅರಿಶಿನ, ½ ಟೇಬಲ್ ಸ್ಪೂನ್ ನಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ.
ನಂತರ ಇದಕ್ಕೆ 1 ದೊಡ್ಡ ಸೈಜಿನ ಕ್ಯಾಪ್ಸಿಕಂ ಅನ್ನು ಉದ್ದಕ್ಕೆ ಕತ್ತರಿಸಿಕೊಂಡು ಹಾಕಿ. ನಂತರ ಒಂದು ಸಣ್ಣ ಟೊಮೆಟೊ ಕತ್ತರಿಸಿಕೊಂಡು ಹಾಕಿ. ¼ ಕಪ್ ಹಸಿ ಬಟಾಣಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಪ್ಲೇಟ್ ಮುಚ್ಚಿ.
ಕ್ಯಾಪ್ಸಿಕಂ ಚೆನ್ನಾಗಿ ಬೇಯಲಿ. ನಂತರ 3 ಟೇಬಲ್ ಸ್ಪೂನ್ ನಷ್ಟು ಹುಣಸೆ ಹಣ್ಣಿನ ರಸ, 2 ಟೇಬಲ್ ಸ್ಪೂನ್ ವಾಂಗಿಬಾತ್ ಪೌಡರ್, ½ ಟೀ ಸ್ಪೂನ್ ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 2 ಕಪ್ ಅನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಕ್ಯಾಪ್ಸಿಕಂ ಬಾತ್ ಸವಿಯಲು ಸಿದ್ಧ.