alex Certify ಬೆಳಗಿನ ‘ಉಪಹಾರ’ ತ್ಯಜಿಸಿದರೆ ಏನಾಗುತ್ತೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗಿನ ‘ಉಪಹಾರ’ ತ್ಯಜಿಸಿದರೆ ಏನಾಗುತ್ತೆ…?

ನಿಮ್ಮ ದಿನವನ್ನು ಉತ್ತಮವಾಗಿ ಆರಂಭಿಸಬೇಕಾದರೆ ಮೊದಲು ನೀವು ಮಾಡಬೇಕಿರುವುದು ಹೆಲ್ತಿಯಾದ ಉಪಹಾರವನ್ನು ಸೇವಿಸುವುದು. ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಪಾಲಿಸಬೇಕು, ಇಲ್ಲವಾದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಸಾಮಾನ್ಯವಾಗಿ ರಾತ್ರಿ ಊಟದ ಸಮಯಕ್ಕೂ ಬೆಳಗಿನ ಉಪಹಾರದ ಸಮಯದ ಸಡುವೆ ಸುಮಾರು 8-10 ಗಂಟೆಗಳ ಅಂತರವಿರಬೇಕು. ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡಿದರೆ ತೂಕವನ್ನು ಕಳೆದುಕೊಳ್ಳಬಹುದೆಂಬ ತಪ್ಪು ಕಲ್ಪನೆ ಇದೆ. ನಿಮ್ಮ ಬೆಳಗಿನ ತಿಂಡಿಯನ್ನು ಬಿಟ್ಟರೆ ದೀರ್ಘ ಕಾಲದವರೆಗೆ ಖಾಲಿ ಹೊಟ್ಟೆಯಿಂದಿರುತ್ತೀರಿ.

ಹಾಗೇನಾದರೂ ಮಾಡಿದಲ್ಲಿ, ನೇರವಾಗಿ ಮಧ್ಯಾಹ್ನದ ಊಟವನ್ನು ಸೇವಿಸಬೇಕಾಗುತ್ತದೆ. ಆಗ ಸಾಮಾನ್ಯಕ್ಕಿಂತ ಹೆಚ್ಚಿಗೆ ತಿನ್ನುವಂತೆ ಆಗುತ್ತದೆ. ಇದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಬದಲು ಬೊಜ್ಜು ಕಾಣಿಸಿಕೊಂಡು, ಹೊಟ್ಟೆಯ ಆಮ್ಲೀಯತೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

ಬೆಳಗಿನ ತಿಂಡಿಯನ್ನು ಬಿಟ್ಟರೆ, ಸಣ್ಣಗಾಗಬಹುದು ಅನ್ನೋ ಕಲ್ಪನೆ ಸಾಕಷ್ಟು ಜನರಲ್ಲಿದೆ. ಇದೊಂದು ತಪ್ಪು ಕಲ್ಪನೆಯಾಗಿದ್ದು, ಅನಿಯಮಿತ ಆಹಾರ ಪದ್ಧತಿಯಿಂದಾಗಿ, ಸ್ಥೂಲಕಾಯ, ಟೈಪ್ 2 ಡಯಾಬಿಟಿಸ್, ರಕ್ತದೊತ್ತಡ ಮತ್ತು ಕಾರ್ಡಿಯೋವಾಸ್ಕ್ಯುಲಾರ್ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸರಿಯಾದ ಆಹಾರ ಪದ್ಧತಿಗಳನ್ನು ಪಾಲಿಸಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...