ಬೆಳಗಾವಿ: ಬೆಳಗಾವಿ ಜಿಲ್ಲೆ ವಿಭಜನೆಯಾಗಲೇಬೇಕು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯಿಸಿದ್ದಾರೆ.
ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ಮೂರು ಜಿಲ್ಲೆಗಳಾಗಿ ವಿಭಜನೆಯಾಗಬೇಕು. ಎಷ್ಟೊಂದು ಜನರು ತಮ್ಮ ಕೆಲಸಗಳಿಗಾಗಿ ದೂರದಿಂದ ಬರಬೇಕಾಗುತ್ತಿದೆ. ಸಾಕಷ್ಟು ಜನರು ಸಮಸ್ಯೆ ತೋಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲಾ ವಿಭಜನೆಗೆ ನಮ್ಮ ಬೆಂಬಲವಿದೆ. ಸಚಿವ ಉಮೇಶ್ ಕತ್ತಿ ನೇತೃತ್ವದ ನಿಯೋಗ ಸಿಎಂ ಭೇಟಿಯಾಗಿ ಮನವಿ ಮಾಡಿದರೆ ಅದಕ್ಕೆ ಪಕ್ಷಾತೀತವಾಗಿ ನಮ್ಮ ಸಹಕಾರ ವ್ಯಕ್ತಪಡಿಸುತ್ತೇವೆ ಎಂದರು.
ಇಲ್ಲಿ ಬರೀ 85 ರೂಪಾಯಿಗೆ ಸಿಗ್ತಿದೆ ಮನೆ, ಖರೀದಿಗೆ ಮುಗಿಬಿದ್ದ ಜನ….!
ಈಗಾಗಲೇ ಬೆಳಗಾವಿ ತಾಲೂಕು ವಿಭಜನೆಗೆ ನಾನು ಸಿಎಂ ಭೇಟಿಯಾಗಿ ಮನವಿ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತಕ್ಷಣ ಮಾಡುವುದೇ ಜಿಲ್ಲಾ ವಿಭಜನೆ. ಅಭಿವೃದ್ಧಿಗಾಗಿ ವಿಭಜನೆ ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಅವಧಿ ಪೂರ್ವ ವಿಧಾನಸಭೆ ಚುನಾವಣೆ ಎದುರಾದರೆ ಕಾಂಗ್ರೆಸ್ ಎದುರಿಸಲು ಸಿದ್ಧ ಎಂದು ಹೇಳಿದರು.