ದೀಪಾವಳಿ ಸಂದರ್ಭದಲ್ಲಿ ಮಾರುಕಟ್ಟೆಯಾಳ್ತಿದ್ದ ಚೀನಾ ದೀಪಗಳ ಮಾರಾಟ ಇತ್ತೀಚೆಗೆ ಕಡಿಮೆಯಾಗಿದೆ. ಖುಷಿಯ ವಿಚಾರವೆಂದ್ರೆ ಮಣ್ಣಿನಿಂದ ಮಾಡಿದ ಭಾರತೀಯ ದೀಪಗಳ ಬೇಡಿಕೆ ಏರಿಕೆ ಕಾಣುತ್ತಿದೆ.
ದೀಪಾವಳಿ ಸಂದರ್ಭದಲ್ಲಿ ಮನೆ ಬೆಳಗಲು ಜನರು ಮಣ್ಣಿನಿಂದ ಮಾಡಿದ ದೀಪಗಳನ್ನು ಖರೀದಿ ಮಾಡ್ತಿದ್ದಾರೆ. ಮಣ್ಣಿನ ಕಳಶ, ದೇವರ ಮೂರ್ತಿ ಹಾಗೂ ಮಣ್ಣಿನಿಂದ ಮಾಡಿದ ಕಲಾತ್ಮಕ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಭಾರತೀಯರು ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ಪರಿಪಾಠವನ್ನು ಮುಂದುವರೆಸಿಕೊಂಡು ಹೋಗಬೇಕಿದೆ.