ಮನೆಯಲ್ಲೇ ರುಚಿ ರುಚಿಯಾಗಿ ತಿನಿಸುಗಳನ್ನು ಮಾಡಿ, ಎಲ್ಲರೊಡನೆ ಬೆರೆತು ಸವಿಯುವುದು ಉತ್ತಮ. ಅಕ್ಕಿ ಹಾಗೂ ಬೆಲ್ಲದ ಪಾಯಸ ನಿಮ್ಮ ಸವಿಯನ್ನು ಮತ್ತಷ್ಟು ಹೆಚ್ಚಿಸೋದ್ರಲ್ಲಿ ಅನುಮಾನವೇ ಇಲ್ಲ. ಅದನ್ನು ಹೇಗ್ ಮಾಡೋದು ಅನ್ನೋದನ್ನು ನೋಡೋಣ.
ಬೇಕಾಗುವ ಸಾಮಗ್ರಿ :
1 ಕಪ್ ಅಕ್ಕಿ,
16 ಕಪ್ ಹಾಲು,
ಬೆಲ್ಲ,
ಏಲಕ್ಕಿ ಪುಡಿ,
ಗೋಡಂಬಿ,
ಒಣದ್ರಾಕ್ಷಿ
BIG NEWS: ಜಾಮೀನಿನ ಮೇಲೆ ಮತ್ತೆ ಬಿಡುಗಡೆಯಾದ ಹ್ಯಾಕರ್ ಶ್ರೀಕಿ
ಮಾಡುವ ವಿಧಾನ :
ಅಕ್ಕಿಯನ್ನು 3 ಗಂಟೆಗಳ ಕಾಲ ನೆನೆಸಿ ಚೆನ್ನಾಗಿ ತೊಳೆಯಿರಿ. ನಂತರ ದಪ್ಪ ತಳದ ಪಾತ್ರೆಗೆ ಅಕ್ಕಿ ಮತ್ತು ಹಾಲನ್ನು ಹಾಕಿ ಬೇಯಲು ಇಡಿ. ಸಣ್ಣ ಉರಿಯಲ್ಲಿ ಬೇಯಿಸಿ, ಆಗಾಗ ಸೌಟಿನಿಂದ ತಿರುವುತ್ತಿರಿ. ಅಕ್ಕಿ ಮೆತ್ತಗಾಗಿ ಚೆನ್ನಾಗಿ ಬೇಯಬೇಕು. ಹಾಲು ಕೂಡ ಕ್ರೀಮಿನಂತಾದ ಬಳಿಕ ಪಾತ್ರೆಯನ್ನು ಸ್ಟವ್ ನಿಂದ ಕೆಳಗಿಳಿಸಿ.
ತಕ್ಷಣ ಅದಕ್ಕೆ ಬೆಲ್ಲ ಹಾಕಬೇಡಿ, ಹಾಗೆ ಮಾಡಿದರೆ ಹಾಲು ಒಡೆದು ಹೋಗುವ ಸಾಧ್ಯತೆ ಹೆಚ್ಚು. 15 ನಿಮಿಷ ಹಾಗೇ ಮುಚ್ಚಿಡಿ. ನಂತರ ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಏಲಕ್ಕಿ ಪುಡಿ ಹಾಕಿ. ಡ್ರೈ ಫ್ರೂಟ್ ಗಳನ್ನೆಲ್ಲ ತುಪ್ಪದಲ್ಲಿ ಹುರಿದು ಅದನ್ನೂ ಹಾಕಿ ಅಲಂಕರಿಸಿ. ಅಕ್ಕಿ ಹಾಗೂ ಬೆಲ್ಲದ ಖೀರು ಸವಿಯಲು ಸಿದ್ಧ.