ಬೇಕಾಗುವ ಸಾಮಾಗ್ರಿಗಳು:
ಕಾಯಿತುರಿ – 2 ಕಪ್, ಬೆಲ್ಲ – 1 ಕಪ್, ತುಪ್ಪ, ಏಲಕ್ಕಿ.
ಮಾಡುವ ವಿಧಾನ:
ಕಾಯಿತುರಿನ ಮಿಕ್ಸಿಯಲ್ಲಿ ತರಿತರಿ ರುಬ್ಬಬೇಕು. ದಪ್ಪ ತಳದ ಪಾತ್ರೆಯಲ್ಲಿ 2 ರಿಂದ 3 ಸ್ಪೂನ್ ತುಪ್ಪ ಹಾಕಿ. ಬಳಿಕ ರುಬ್ಬಿದ ಕಾಯಿತುರಿ ಹಾಕಿ ಮಧ್ಯಮ ಉರಿಯಲ್ಲಿ 3 ರಿಂದ 4 ನಿಮಿಷ ಚೆನ್ನಾಗಿ ಹುರಿಯಬೇಕು. ಕಾಯಿತುರಿ ಡ್ರೈ ಆದ ಮೇಲೆ ಅದನ್ನು ಮೇಲೆ ಹಾಗೆಯೇ ತಣಿಯಲು ಬಿಡಿ. ಇನ್ನೊಂದು ಪಾತ್ರೆಗೆ ಬೆಲ್ಲ ಹಾಕಿ 2 ರಿಂದ 3 ಟೀ ಸ್ಪೂನ್ ನೀರು ಹಾಕಿ ಬೆಲ್ಲ ಕರಗಿಸಿ. ಪಾಕ ಮಾಡುವುದು ಬೇಡ ಬೆಲ್ಲ ಕರಗಿದರೆ ಸಾಕು. ಬಳಿಕ ತೆಂಗಿನತುರಿಗೆ ಬೆಲ್ಲ ಸೋಸಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಒಮ್ಮೆ ತಿಂದು ನೋಡಿ ಈ ದೋಸೆ ʼಪಿಜ್ಜಾ’
ಬೆಲ್ಲದ ಪಾಕದಲ್ಲಿ ಕಾಯಿತುರಿ ಚೆನ್ನಾಗಿ ಬೇಯಬೇಕು. ಬರ್ಫಿ ಹದಕ್ಕೆ ಬಂದಾಗ ಸರ್ವಿಂಗ್ ಟ್ರೇ ಗೆ ತುಪ್ಪ ಹಚ್ಚಿಟ್ಟುಕೊಳ್ಳಿ.
20 ರಿಂದ 25 ನಿಮಿಷ ಬರ್ಫಿ ರೆಡಿಯಾಗಲು ಸಮಯ ಬೇಕಾಗುತ್ತೆ. ಬರ್ಫಿ ಹದಕ್ಕೆ ಬರುತ್ತಿದ್ದಂತೆ ಕುಟ್ಟಿ ಪುಡಿ ಮಾಡಿದಂತಹ ಏಲಕ್ಕಿ 1 ಟೀ ಸ್ಪೂನ್, 2 ಟೀ ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೈಯನ್ನು ಸ್ವಲ್ಪ ಒದ್ದೆ ಮಾಡಿಕೊಂಡು ಬರ್ಫಿಯನ್ನು ಚಿಕ್ಕ ಉಂಡೆ ತರಹ ಮಾಡಿ ನೋಡಿ ಸರಿಯಾಗಿ ಉಂಡೆ ತರಹ ಬಂದ್ರೆ ಬರ್ಫಿ ಹದಕ್ಕೆ ಬಂದಿದೆ ಅಂತಾ ಅರ್ಥ. ಕೈಗೆ ಅಂಟಬಾರದು. ಬಳಿಕ ತುಪ್ಪ ಸವರಿದ ಪ್ಲೇಟ್ ಗೆ ಹಾಕಿ ಸೆಟ್ ಮಾಡಿ. ಅರ್ಧ ಗಂಟೆ ಹಾಗೆ ಬಿಡಬೇಕು. ಬಳಿಕ ಬೇಕಾದ ರೀತಿಯಲ್ಲಿ ಕಟ್ ಮಾಡಿಕೊಂಡರೆ ರುಚಿಯಾದ ಬೆಲ್ಲದ ಕೊಬ್ಬರಿ ಮಿಠಾಯಿ ರೆಡಿ.