ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ಬೆಲ್ಲವೂ ಒಂದು. ಬೆಲ್ಲವನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗೇ ಬೆಲ್ಲದ ಜೊತೆ ಇತರ ಕೆಲವು ಪದಾರ್ಧಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆಯಂತೆ.
*ಬೆಲ್ಲ ಮತ್ತು ತುಪ್ಪ : ಬೆಲ್ಲದ ಜೊತೆ ತುಪ್ಪವನ್ನು ಸೇರಿಸಿ ತಿಂದರೆ ಜೀರ್ಣ ಕ್ರಿಯೆಗೆ ಸಹಾಯವಾಗುತ್ತದೆ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ.
*ಧನಿಯಾ ಬೀಜ ಮತ್ತು ಬೆಲ್ಲ : ಧನಿಯಾ ಬೀಜದ ಜೊತೆ ಬೆಲ್ಲವನ್ನು ಮಿಕ್ಸ್ ಮಾಡಿ ತಿಂದರೆ ಅವಧಿಯಲ್ಲಿ ರಕ್ತಸ್ರಾವ ಕಡಿಮೆಯಾಗುತ್ತದೆ. ಇದು ಮಹಿಳೆಯರಲ್ಲಿ ಕಂಡುಬರುವ ಪಿಸಿಒಡಿ ಸಮಸ್ಯೆಯನ್ನು ನಿವಾರಿಸುತ್ತದೆ.
*ಸೊಂಪು ಮತ್ತು ಬೆಲ್ಲ : ಸೊಂಪಿನ ಜೊತೆಗೆ ಬೆಲ್ಲವನ್ನು ಸೇರಿಸಿ ತಿಂದರೆ ಬಾಯಿ ವಾಸನೆಯಿಂದ ಮುಕ್ತಿ ಸಿಗುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.
*ಮೆಂತ್ಯ ಬೀಜ ಮತ್ತು ಬೆಲ್ಲ : ಮೆಂತ್ಯೆ ಬೀಜದೊದಿಗೆ ಬೆಲ್ಲವನ್ನು ಮಿಕ್ಸ್ ಮಾಡಿ ತಿಂದರೆ ಕೂದಲಿನ ಆರೋಗ್ಯಕ್ಕೆ ಉತ್ತಮ ಮತ್ತು ಕೂದಲು ಉದುರುವುದು ಮತ್ತು ಬೇಗನೆ ಬಿಳಿಯಾಗುವುದನ್ನು ತಡೆಯಬಹುದು.
*ಕಡಲೆಕಾಯಿ ಮತ್ತು ಬೆಲ್ಲ : ಇವೆರಡನ್ನು ಮಿಕ್ಸ್ ಮಾಡಿ ತಿಂದರೆ ಹಸಿವನ್ನು ನಿಯಂತ್ರಿಸಬಹುದು.
* ಅರಶಿನ ಮತ್ತು ಬೆಲ್ಲ : ಅರಶಿನದೊಂದಿಗೆ ಬೆಲ್ಲವನ್ನು ಮಿಕ್ಸ್ ಮಾಡಿ ತಿಂದರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
*ಒಣ ಶುಂಠಿ ಮತ್ತು ಬೆಲ್ಲ : ಇದನ್ನು ಸೇವಿಸಿದರೆ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಬಹುದು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.