ರಾಮನಗರ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಬೆಲೆ ಏರಿಕೆ ನಾಡಿನ ಜನತೆಗೆ ಬಿಜೆಪಿ ಸರ್ಕಾರದ ಕೊಡುಗೆ ಎಂದು ವ್ಯಂಗ್ಯವಾಡಿದ್ದಾರೆ.
ರಾಮನಗರದ ಚೆನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಬಡ ಜನರ ಮೇಲೆ ಬೆಲೆ ಏರಿಕೆ ಹೊರೆ ಹೇರಿದ್ದಾರೆ. ಓರ್ವ ಕೂಲಿ ಕಾರ್ಮಿಕ ಕೂಡ ಹಲವು ರೀತಿಯಲ್ಲಿ ವರ್ಷಕ್ಕೆ 1 ಲಕ್ಷದವರೆಗೂ ತೆರಿಗೆ ಪಾವತಿಸುತ್ತಾನೆ. ತೈಲ ಬೆಲೆ ಏರಿಕೆ ಬಗ್ಗೆ ಜನ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಸರ್ಕಾರ ಬಡ ಜನರಿಗೆ ನೀಡುತ್ತಿರುವ ಕೊಡುಗೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೂಟ್ಯೂಬ್ ಚಾಟ್ ಶೋನಲ್ಲಿ ಬಿದ್ದು ಬಿದ್ದು ನಕ್ಕ ನಟಿ ಶಿಲ್ಪಾ ಶೆಟ್ಟಿ..!
ಬಿಜೆಪಿ ನಾಯಕರು ಕೇವಲ ಜಾಹೀರಾತು ಮೂಲಕ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಾ, ಭಾಷಣ, ಸಮಾರಂಭಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಯಾವುದೇ ಯೋಜನೆಗಳೂ ಜನರಿಗೆ ತಲುಪುತ್ತಿಲ್ಲ. ಈವರೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಎಂಬ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ. ಕರ್ನಾಟಕ ಮ್ಯಾಪ್ ಇದೆಯೋ ಅದನ್ನೂ ಕಿತ್ತಾಕಿದ್ದಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.