alex Certify ಬೆಲೆ ಏರಿಕೆ ನಡುವೆಯೇ ಖುಷಿ ಸುದ್ದಿ: ನಾಲ್ಕು ವರ್ಷಗಳಲ್ಲಿ ಏರಿಕೆ ಕಂಡಿದೆ ರೈತರ ಆದಾಯ, SBI ಅಧ್ಯಯನದಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆ ನಡುವೆಯೇ ಖುಷಿ ಸುದ್ದಿ: ನಾಲ್ಕು ವರ್ಷಗಳಲ್ಲಿ ಏರಿಕೆ ಕಂಡಿದೆ ರೈತರ ಆದಾಯ, SBI ಅಧ್ಯಯನದಲ್ಲಿ ಬಹಿರಂಗ

2022-23ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ತನ್ನ ಗುರಿ ಪೂರೈಸಲು ಸರ್ಕಾರ ಹರಸಾಹಸ ಪಡುತ್ತಿರುವಾಗಲೇ ಎಸ್‌.ಬಿ.ಐ. ಅಧ್ಯಯನವೊಂದರಲ್ಲಿ ಖುಷಿ ಸುದ್ದಿ ಸಿಕ್ಕಿದೆ. 2017-18 ಮತ್ತು 2021-22ರ ಆರ್ಥಿಕ ವರ್ಷದ ನಡುವೆ, ರೈತರ ಸರಾಸರಿ ಆದಾಯವು 1.3 ರಿಂದ 1.7 ರಷ್ಟು ಏರಿಕೆಯಾಗಿದೆ ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.

ಮಹಾರಾಷ್ಟ್ರದಲ್ಲಿ ಸೋಯಾಬೀನ್ ಬೆಳೆಗಾರರು ಮತ್ತು ಕರ್ನಾಟಕದಲ್ಲಿ ಹತ್ತಿಯಂತಹ ಕೆಲವು ಬೆಳೆಗಳನ್ನು ಬೆಳೆಯುತ್ತಿರುವವರ ಆದಾಯ  ದ್ವಿಗುಣಗೊಂಡಿದೆ. ಅಧ್ಯಯನದ ಪ್ರಕಾರ ನಗದು ಬೆಳೆಗಳನ್ನು ಬೆಳೆಯುವ ರೈತರ ಆದಾಯವು ನಗದುರಹಿತ ಬೆಳೆಗಳನ್ನು ಬೆಳೆಯುವವರಿಗಿಂತ ಹೆಚ್ಚಾಗಿದೆ. ಎಸ್‌.ಬಿ.ಐ. ಅಧ್ಯಯನವು ರಾಜ್ಯಗಳಾದ್ಯಂತ ಕೃಷಿ ಬಂಡವಾಳದ ಪ್ರಾಥಮಿಕ ಅಂಕಿ-ಅಂಶಗಳನ್ನು ಆಧರಿಸಿದೆ.

‘ಟಿ-ಟೆಸ್ಟ್’, ‘ಎಫ್‌ಟೆಸ್ಟ್’ ಮತ್ತು ‘ಲೊರೆನ್ಜ್ ಕರ್ವ್’ ಅನ್ನು ಬಳಸುವ ಈ ಅಂಕಿ ಅಂಶಗಳ ತೀರ್ಮಾನಗಳು ಸರಾಸರಿ ಆದಾಯದಲ್ಲಿ ಹೆಚ್ಚಳ ಮತ್ತು ಅಸಮಾನತೆಯ ಇಳಿಕೆಯನ್ನು ತೋರಿಸುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಅವಧಿಯಲ್ಲಿ ರೈತರ ಆದಾಯದ ಹೆಚ್ಚಳಕ್ಕೆ ಅನುಗುಣವಾಗಿ ಕೃಷಿಯೇತರ ಚಟುವಟಿಕೆಗಳ ಆದಾಯವು 1.4 ರಿಂದ 1.8 ಪಟ್ಟು ಹೆಚ್ಚಾಗಿರುವುದು ವಿಶೇಷ.

2015-16 ರಲ್ಲಿ ಕೃಷಿ ಕುಟುಂಬದ ಸರಾಸರಿ ವಾರ್ಷಿಕ ಆದಾಯವನ್ನು 96,703 ರೂಪಾಯಿ ಎಂದು ಅಂದಾಜಿಸಲಾಗಿತ್ತು. ಇದು 2022-23ರ ವೇಳೆಗೆ 1,72,694 ರೂಪಾಯಿಗೆ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆ ಇದೆ. ಎಸ್‌.ಬಿ.ಐ. ವರದಿಯು ಕಳೆದ ಕೆಲವು ವರ್ಷಗಳಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಗಳು ಘೋಷಿಸಿದ ಕೃಷಿ ಸಾಲ ಮನ್ನಾಗಳನ್ನು ಬಲವಾಗಿ ಟೀಕಿಸಿದೆ. ಇದು ಆಯ್ದ ಭೌಗೋಳಿಕತೆಗಳಲ್ಲಿನ ಸಾಲದ ಶಿಸ್ತುಗಳನ್ನು ಹಾಳುಮಾಡಿದೆ ಎಂಬುದು ಎಸ್‌.ಬಿ.ಐ. ಅಭಿಪ್ರಾಯ.

2014 ರಿಂದ ಸುಮಾರು 37 ಮಿಲಿಯನ್ ಅರ್ಹ ರೈತರಲ್ಲಿ, ಕೇವಲ 50 ಪ್ರತಿಶತದಷ್ಟು ಜನರು ಮಾತ್ರ ಸಾಲ ಮನ್ನಾ ಮೊತ್ತವನ್ನು ಸ್ವೀಕರಿಸಿದ್ದಾರೆ ಎಂದು ಅದು ಹೇಳಿದೆ. ಆದರೂ ಕೆಲವು ರಾಜ್ಯಗಳಲ್ಲಿ 90 ಪ್ರತಿಶತದಷ್ಟು ರೈತರು ಸಾಲ ಮನ್ನಾ ಮೊತ್ತವನ್ನು ಸ್ವೀಕರಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ರೈತರಿಗೆ ಉತ್ತಮ ಬೆಲೆಗಳನ್ನು ಖಾತ್ರಿಪಡಿಸುವಲ್ಲಿ ಪ್ರಮುಖವಾಗಿದೆ ಎಂದು ವರದಿ ಹೇಳಿದೆ. ಇದು ಉತ್ತಮ ಇಳುವರಿ ಅಥವಾ ಮೌಲ್ಯವನ್ನು ಹೊಂದಿರುವ ಬೆಳೆಗಳತ್ತ ಮುಖ ಮಾಡಲು ಕ್ರಮೇಣ ರೈತರನ್ನು ಪ್ರೇರೇಪಿಸುತ್ತದೆ.

ವರದಿಯಲ್ಲಿ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ (ಕೆಸಿಸಿ) ಯೋಜನೆಯನ್ನು ಶ್ಲಾಘಿಸಲಾಗಿದೆ. ಆದಾಗ್ಯೂ ಪ್ರಸ್ತುತ ನಿಯಂತ್ರಕ ನಿಯಮಗಳು ಕೆಸಿಸಿಗಳನ್ನು ನವೀಕರಿಸಲು ಮತ್ತು ವಿಸ್ತರಿಸಲು ಬ್ಯಾಂಕ್‌ಗಳ ಸಮಯವನ್ನು ಹೆಚ್ಚು ತೆಗೆದುಕೊಳ್ಳುತ್ತದೆ. ಅದನ್ನು ಸರಳಗೊಳಿಸಿದರೆ ಸಾಕಷ್ಟು ಸಮಯವನ್ನು ಉಳಿಸಬಹುದು.

KCC ಸಾಲಗಳನ್ನು ನವೀಕರಿಸಲು ಬ್ಯಾಂಕುಗಳು ಸುಮಾರು 2.3 ಮಿಲಿಯನ್ ದಿನಗಳನ್ನು ಬಳಸುತ್ತವೆ ಎಂದು SBI ಅಂದಾಜಿಸಿದೆ. ನಿಯಮಾವಳಿಗಳನ್ನು ಸರಳಗೊಳಿಸಿದ್ದರೆ ಈ ಸಮಯವನ್ನು ಕೃಷಿಗೆ ಹೊಸದಾಗಿ ಸಾಲ ನೀಡಲು ಬಳಸಿಕೊಳ್ಳಬಹುದಿತ್ತು. ಗೇಣಿದಾರ ರೈತರನ್ನು ಔಪಚಾರಿಕ ಸಾಲ ವ್ಯವಸ್ಥೆಗೆ ತರಲು ಹಿಡುವಳಿ ಪ್ರಮಾಣಪತ್ರಗಳನ್ನು ನೀಡಲು ರಾಜ್ಯ ಮಧ್ಯಸ್ಥಿಕೆ ವಹಿಸಬೇಕೆಂದು ಸಲಹೆ ನೀಡಲಾಗಿದೆ. PM-KISAN ಮತ್ತು KCC ಫಲಾನುಭವಿಗಳ ವಿಶ್ಲೇಷಣೆಯ ಆಧಾರದ ಮೇಲೆ ಭಾರತದಲ್ಲಿ 20-30 ಮಿಲಿಯನ್ ಭೂರಹಿತ ಅಥವಾ ಹಿಡುವಳಿದಾರ ರೈತರಿದ್ದಾರೆ ಎಂದು ಅಂದಾಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...