alex Certify ಬೆಲೆ ಏರಿಕೆಗೆ ಕಡಿವಾಣ ಹಾಕಲು ಸರ್ಕಾರದ ಕಸರತ್ತು : ಗೋಧಿ ಹಿಟ್ಟು, ಮೈದಾ, ರವೆ ರಫ್ತು ಮಾಡದಂತೆ ನಿಷೇಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆಗೆ ಕಡಿವಾಣ ಹಾಕಲು ಸರ್ಕಾರದ ಕಸರತ್ತು : ಗೋಧಿ ಹಿಟ್ಟು, ಮೈದಾ, ರವೆ ರಫ್ತು ಮಾಡದಂತೆ ನಿಷೇಧ

ಭಾರತದಲ್ಲಿ ದಿನಬಳಕೆ ವಸ್ತುಗಳೆಲ್ಲ ದುಬಾರಿಯಾಗಿವೆ. ಗೋಧಿ ಹಿಟ್ಟಿನ ಬೆಲೆ ಕೂಡ ಏರಿಕೆಯಾಗಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಗೋಧಿ ಹಿಟ್ಟು, ಮೈದಾ, ರವೆ ಮತ್ತು ವ್ಹೋಲ್‌ ಮೀಲ್‌ ಆಟಾವನ್ನು ರಫ್ತು ಮಾಡದಂತೆ ನಿಷೇಧಿಸಿದೆ. ಈ ಮೊದಲು ಮೇ ತಿಂಗಳಿನಲ್ಲಿ ಗೋಧಿಯನ್ನು ರಫ್ತು ಮಾಡದಂತೆ ಸರ್ಕಾರ ನಿಷೇಧ ಹೇರಿತ್ತು.  ಕೆಲವು ಸಂದರ್ಭಗಳಲ್ಲಿ ಭಾರತ ಸರ್ಕಾರದ ಅನುಮತಿಗೆ ಒಳಪಟ್ಟು ಈ ವಸ್ತುಗಳ ರಫ್ತಿಗೆ ಅವಕಾಶ ನೀಡಲಾಗುವುದು ಅಂತಾ ಹೇಳಲಾಗಿದೆ.

ಏರುತ್ತಿರುವ ಸರಕುಗಳ ಬೆಲೆಗಳನ್ನು ನಿಯಂತ್ರಣಕ್ಕೆ ತರಲು ಗೋಧಿ ಅಥವಾ ಮೆಸ್ಲಿನ್ ಹಿಟ್ಟಿನ ರಫ್ತು ನಿಷೇಧಿಸಲು ಸರ್ಕಾರ ನಿರ್ಧರಿಸಿತು. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ರಷ್ಯಾ ಮತ್ತು ಉಕ್ರೇನ್ ಗೋಧಿಯ ಪ್ರಮುಖ ರಫ್ತುದಾರ ರಾಷ್ಟ್ರಗಳಾಗಿದ್ದವು. ಜಾಗತಿಕ ಗೋಧಿ ವ್ಯಾಪಾರದ ಕಾಲು ಭಾಗದಷ್ಟನ್ನು ಈ ರಾಷ್ಟ್ರಗಳೇ ಪೂರೈಸುತ್ತಿದ್ದವು. ಉಭಯ ದೇಶಗಳ ನಡುವಿನ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಗೋಧಿ ಪೂರೈಕೆಗೆ ಅಡಚಣೆಯಾಗಿದೆ.

ಇದರಿಂದಾಗಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಿದೆ. ಭಾರತದ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಏರಿಕೆಯಾಗಿದೆ. ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸಲು ಮೇ ತಿಂಗಳಲ್ಲಿ ಸರ್ಕಾರ  ಗೋಧಿ ರಫ್ತು ನಿಷೇಧಿಸಿತ್ತು. ಇದರಿಂದಾಗಿ ಗೋಧಿ ಹಿಟ್ಟಿಗೆ ವಿದೇಶಿ ಬೇಡಿಕೆ ಹೆಚ್ಚಾಯ್ತು. 2021ರ ಇದೇ ಅವಧಿಗೆ ಹೋಲಿಸಿದರೆ 2022ರ ಏಪ್ರಿಲ್-ಜುಲೈ ಅವಧಿಯಲ್ಲಿ ಭಾರತದಿಂದ ಗೋಧಿ ಹಿಟ್ಟಿನ ರಫ್ತು ಶೇಕಡಾ 200 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ವಿದೇಶದಲ್ಲಿ ಗೋಧಿ ಹಿಟ್ಟಿಗೆ ಹೆಚ್ಚುತ್ತಿರುವ ಬೇಡಿಕೆಯು ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...