ಬೆಲಾರಸ್-ಪೋಲೆಂಡ್ ಗಡಿ ಬಿಕ್ಕಟ್ಟು ಬಿಗಿಯಾಗುತ್ತಿದ್ದಂತೆ, ಪಂಜಾಬ್‌ನ ನಾಲ್ವರು ಪೋಲೆಂಡ್‌ನ ಗಡಿ ಕಾವಲುಗಾರರಿಂದ ಬಂಧನಕ್ಕೊಳಗಾಗಿದ್ದಾರೆ. ಹಲವು ವರ್ಷಗಳಿಂದ, ಪೂರ್ವ ಯುರೋಪಿನ ದೇಶಗಳು ಅಕ್ರಮ ಭಾರತೀಯ ವಲಸಿಗರಿಗೆ ಯುರೋಪಿಯನ್ ಒಕ್ಕೂಟಕ್ಕೆ ಪ್ರವೇಶಿಸಲು ಮತ್ತು ನೆಲೆಸಲು ಆಶಿಸುತ್ತಿರುವ ಪ್ರವೇಶದ ಬಂದರುಗಳಿಗೆ ತಲುಪಲು ಈ ದಾರಿ ಒಂದಾಗಿತ್ತು.
ಬೆಲಾರಸ್-ಪೋಲೆಂಡ್ ಗಡಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟು, ಅಕ್ರಮ ವಲಸಿಗರ ಜನಪ್ರಿಯ ಮಾರ್ಗಗಳಲ್ಲಿ ಒಂದನ್ನು ಕಡಿತಗೊಳಿಸಿದೆ. ಮೊದಲು ಅಕ್ರಮ ವಲಸಿಗರನ್ನ ಮತ್ತೊಂದು ಭಾಗಕ್ಕೆ ವರ್ಗಾಯಿಸುತ್ತಿದ್ದ ಇದೇ ಮಾರ್ಗ ಇಂದು ಇವರ ಬಂಧನಕ್ಕೆ ಕಾರಣವಾಗಿದೆ.
ಪಾಠ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಶಿಕ್ಷಕ ಸಾವು; ಮುಗಿಲು ಮುಟ್ಟಿದ ವಿದ್ಯಾರ್ಥಿಗಳ ಆಕ್ರಂದನ
ಗಡಿ ಬಿಕ್ಕಟ್ಟು ಯಾವ ಮಟ್ಟಿಗೆ ಹದಗೆಟ್ಟಿದೆಯೆಂದರೆ, ಈ ಬೇಸಿಗೆಯಲ್ಲಿ, ವಲಸಿಗರು ಯುರೋಪಿಯನ್ ಒಕ್ಕೂಟವನ್ನು ಪ್ರವೇಶಿಸುವ ಆಶಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಲಾರಸ್‌ಗೆ ಪ್ರಯಾಣಿಸಲು ಪ್ರಾರಂಭಿಸಿದರು ಅದ್ರಲ್ಲಿ ಸಾಕಷ್ಟು ಮಂದಿ ಎರಡು ಗಡಿಯ ಕಾವಲುಗಾರರಿಂದ ಬಂಧಿಸಲ್ಪಿಟ್ಟಿದ್ದಾರೆ.
ನವೆಂಬರ್ ತಿಂಗಳಲ್ಲಿ ಯುರೋಪಿಯನ್ ಒಕ್ಕೂಟ ಪ್ರದೇಶ ಸೇರಲು ಹೊರಟ ನಾಲ್ವರು ಭಾರತೀಯರನ್ನ ಪೋಲ್ಯಾಂಡ್ ನಲ್ಲಿ ಬಂಧಿಸಲಾಗಿದೆ. ಅಕ್ಟೋಬರ್‌ನಲ್ಲಿ ಪೋಲ್ಯಾಂಡ್ ಬಾರ್ಡರ್ ಗಾರ್ಡ್ ಅವರು 16 ಇರಾಕಿಗಳು, ಇಬ್ಬರು ಭಾರತೀಯರು ಮತ್ತು ಒಬ್ಬ ಸಿರಿಯನ್ನನ್ನು ಗಡಿಯಲ್ಲಿ ಬಂಧಿಸಿದ್ದಾರೆ. ವಿದೇಶದಲ್ಲಿ ಅವಕಾಶ ಹುಡುಕಿ ಹೊರಟವರು ಸಧ್ಯ ಗಡಿ ಬಿಕ್ಕಟ್ಟಿನಿಂದ ಪಂಜರ ಸೇರಿದ್ದಾರೆ.