ಕೈ ಬೇರೆ ಬೇರೆ ಬೆರಳಿನಲ್ಲಿ ಮಚ್ಚೆಗಳಿರುತ್ತವೆ. ಮಚ್ಚೆ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಯಾವ ಬೆರಳಿನ ಮೇಲೆ ಮಚ್ಚೆಯಿದ್ರೆ ಯಾವ ಪ್ರಭಾವ ನಮ್ಮ ಮೇಲಾಗುತ್ತದೆ ಎಂಬುದನ್ನು ಸಮುದ್ರ ಶಾಸ್ತ್ರದಲ್ಲಿ ಹೇಳಲಾಗಿದೆ.
ಕೆಲವರ ತೋರು ಬೆರಳಿನಲ್ಲಿ ಮಚ್ಚೆ ಇರುತ್ತದೆ. ಸಮುದ್ರ ಶಾಸ್ತ್ರದ ಪ್ರಕಾರ ಇದು ಬಹಳ ಶುಭ ಮಚ್ಚೆಯಂತೆ. ತೋರು ಬೆರಳಿನಲ್ಲಿ ಮಚ್ಚೆ ಹೊಂದಿದವರಿಗೆ ಯಶಸ್ಸು ಹಾಗೂ ಧನ ಪ್ರಾಪ್ತಿಯಾಗುತ್ತದೆ. ಬ್ಯುಸಿನೆಸ್ ಕ್ಷೇತ್ರದಲ್ಲಿ ಇವ್ರು ಯಶಸ್ಸು ಸಾಧಿಸುತ್ತಾರೆ.
ಮಧ್ಯದ ಬೆರಳಿಗೆ ಮಚ್ಚೆಯಿರುವವರು ಸುಖ ಜೀವನ ಕಳೆಯುತ್ತಾರೆ. ಜೀವನದಲ್ಲಿ ಸಾಕಷ್ಟು ಹೋರಾಟ ನಡೆಸುವ ಅವಶ್ಯಕತೆಯಿರುವುದಿಲ್ಲ. ಕಷ್ಟಪಡುವ ಮೊದಲೇ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.
ಉಂಗುರ ಬೆರಳಿನ ಮೇಲೂ ಕೆಲವರಿಗೆ ಮಚ್ಚೆಯಿರುತ್ತದೆ. ಈ ಜನರು ಹೆಚ್ಚು ಜ್ಞಾನವುಳ್ಳವರಾಗಿರುತ್ತಾರೆಂದು ನಂಬಲಾಗಿದೆ. ಜ್ಞಾನದ ಮೂಲಕವೇ ಯಶ ಹಾಗೂ ಸುಖ ಪ್ರಾಪ್ತಿಯಾಗುತ್ತದೆ.
ಕಿರು ಬೆರಳಿನ ಮೇಲೆ ಮಚ್ಚೆಯಿರುವುದು ಶುಭಕರವಲ್ಲ. ಇಂಥವರಿಗೆ ಧನ ಪ್ರಾಪ್ತಿಯೇನೋ ಆಗುತ್ತದೆ. ಆದ್ರೆ ಜೀವನದಲ್ಲಿ ಸುಖ ಪ್ರಾಪ್ತಿಯಾಗುವುದಿಲ್ಲ.
ಹೆಬ್ಬೆರಳಿನ ಮೇಲೆ ಮೆಚ್ಚೆಯಿರುವವರು ಸರಳ ಸ್ವಭಾವದವರಾಗಿರುತ್ತಾರೆ. ಸ್ವಭಾವ ತುಂಬಾ ಸ್ವಚ್ಛವಾಗುತ್ತದೆ. ಸ್ನೇಹಿತರ ಬಳಗ ಕೂಡ ತುಂಬಾ ಇರುತ್ತದೆ.