ಚಂದ್ರ ಖಗೋಳಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಸಾಮಾನ್ಯ ಜನರಿಗೆ ಆಕರ್ಷಣೆಯ ವಿಷಯವಾಗಿ ಉಳಿದಿದ್ದಾನೆ. ಚಂದ್ರನ ಬಗ್ಗೆ ಒಂದು ವಿಶೇಷ ಆಪ್ತತೆಯೂ ಇದೆ.
ಚಂದ್ರನತ್ತ ನಾಸಾದ ಆರ್ಟೆಮಿಸ್ 1 ಮಿಷನ್ ಪ್ರಾರಂಭಿಸುವ ಕೆಲವು ದಿನಗಳ ಮೊದಲು, ಚಂದ್ರನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರ ಸೌಂದರ್ಯವನ್ನು ಇನ್ನಷ್ಟು ಆರಾಧಿಸುವಂತೆ ಮಾಡುತ್ತಿದೆ.
ಖಗೋಳ ಛಾಯಾಗ್ರಾಹಕರಾದ ಆಂಡ್ರ್ಯೂ ಮೆಕಾಥಿರ್ ಮತ್ತು ಕಾನರ್ ಮ್ಯಾಥರ್ನೆ ಚಂದ್ರನ 2,00,000 ಕ್ಕೂ ಹೆಚ್ಚು ಚಿತ್ರಗಳನ್ನು ಸೆರೆಹಿಡಿದಿದ್ದಾರೆ ಹಾಗೂ ‘ಫೋಟೋ-ಸ್ಟಿಚಿಂಗ್’ ಎಂಬ ತಂತ್ರವನ್ನು ಬಳಸಿಕೊಂಡು ಅವುಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಇದರ ಫಲಿತಾಂಶವು ಆಕಾಶಕಾಯದ ವಿಸ್ಮಯಕಾರಿಯಾಗಿ ವಿವರ ನೀಡಿದೆ.
ಅವರು ಎರಡು ವರ್ಷಗಳ ಹಿಂದೆ ಈ ಯೋಜನೆಯಲ್ಲಿ ಪರಸ್ಪರ ಸಹಕರಿಸಿದ್ದರು. ತಮ್ಮ ಹಳೆಯ ಮೂನ್ ಶಾಟ್ ಅನ್ನು ಇನ್ನೂ ಉತ್ತಮವಾದ ಚಿತ್ರದೊಂದಿಗೆ ಮೀರಿಸಿ ಸೆರೆ ಹಿಡಿಯಲು ನಿರ್ಧರಿಸಿದ್ದರು ಎಂದು ಮ್ಯಾಥರ್ನೆ ಬರೆದಿದ್ದಾರೆ.
ಇದು ತಾನು ತೆಗೆದುಕೊಂಡ ಚಂದ್ರನ ಅತ್ಯುನ್ನತ ರೆಸಲ್ಯೂಶನ್ ಶಾಟ್ ಎಂದು ಮಾಥರ್ನ್ ಹೇಳಿದ್ದಾರೆ. ನೆಟ್ಟಿಗರು ಈ ಚಿತ್ರವನ್ನು ನೋಡಿ ಬೆರಗಾಗಿದ್ದಾರೆ. “ಚಂದ್ರನಿಗೆ ಈ ಎಲ್ಲಾ ಬಣ್ಣಗಳ ಛಾಯೆಗಳಿವೆ ಎಂದು ಯಾರು ಭಾವಿಸಿದ್ದರು? ಇದು ಇಲ್ಲಿಯವರೆಗೆ ಯಾವಾಗಲೂ ಬೂದು ಅಥವಾ ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಇದೊಂದು ಅದ್ಭುತ ಕೆಲಸ” ಎಂದು ಕಾಮೆಂಟ್ ಮಾಡಿದ್ದಾರೆ.