
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ ಲಿಗರ್ ಚಿತ್ರ ಬಿಡುಗಡೆಯಾಗಿದೆ. ಪೂರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರ ರಿಲೀಸ್‌ಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡಿತ್ತು.
ಆದ್ರೆ ಮೊದಲ ದಿನ ಸಿನೆಮಾ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಗಿದೆ. ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಆದರೂ ಒಟ್ಟಾರೆಯಾಗಿ ಸಿನೆಮಾ ಪ್ರೇಕ್ಷಕರನ್ನು ಸೆಳೆದಿಲ್ಲ.
ರಮ್ಯಾ ಕೃಷ್ಣ, ರೋನಿತ್ ರಾಯ್, ವಿಶು ರೆಡ್ಡಿ ಮತ್ತು ಮಕರಂದ್ ದೇಶಪಾಂಡೆ ಸೇರಿದಂತೆ ಪ್ರಶಸ್ತಿ ವಿಜೇತ ಬಾಕ್ಸರ್ ಮೈಕ್ ಟೈಸನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ವೆಚ್ಚ ಮತ್ತು ನಟರ ಸಂಭಾವನೆಯಂತೂ ಅಚ್ಚರಿ ಮೂಡಿಸುವಂತಿದೆ.
ವಿಜಯ್ ದೇವರಕೊಂಡ: ವಿಜಯ್ ದೇವರಕೊಂಡ ಲಿಗರ್ ಚಿತ್ರಕ್ಕಾಗಿ ಸಾಕಷ್ಟು ಬೆವರು ಸುರಿಸಿದ್ದಾರೆ. ಕಿಕ್ ಬಾಕ್ಸರ್ ಪಾತ್ರಕ್ಕಾಗಿ ವಿಪರೀತ ಕಸರತ್ತು ಮಾಡಿದ್ದಾರೆ. ಸವಾಲಿನ ಪಾತ್ರವಾಗಿರೋದ್ರಿಂದ ವಿಜಯ್ ದೇವರಕೊಂಡ ಈ ಚಿತ್ರಕ್ಕಾಗಿ 35 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.
ಅನನ್ಯಾ ಪಾಂಡೆ: ಹಿರೋಯಿನ್ ಪಾತ್ರ ನಿಭಾಯಿಸಿರುವ ಅನನ್ಯಾ ಪಾಂಡೆ ಅಭಿನಯದಲ್ಲಿ ಸೊನ್ನೆ ಅಂತಾನೇ ಹೇಳಬಹುದು. ಆದರೂ ಲಿಗರ್ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿರೋದ್ರಿಂದ ಆಕೆಗೂ 3 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ.
ರೋನಿತ್ ರಾಯ್: ಚಿತ್ರದಲ್ಲಿ ವಿಜಯ್ ಅವರ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರೋನಿತ್ ರಾಯ್ ಕೂಡ 1.5 ಕೋಟಿ ರೂಪಾಯಿ ಪಡೆದಿದ್ದಾರಂತೆ.
ರಮ್ಯಾ ಕೃಷ್ಣನ್: ಚಿತ್ರದಲ್ಲಿ ವಿಜಯ್ ದೇವರಕೊಂಡ ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣನ್ ನಟಿಸಿದ್ದಾರೆ. ರಮ್ಯಾ ಕೃಷ್ಣನ್‌ಗೆ 1 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆಯಂತೆ.