ಬೆನ್ನು ನೋವು ಜೀವ ಹಿಂಡುತ್ತಿದೆಯೇ, ಸಣ್ಣ ಪ್ರಾಯದಲ್ಲೇ ಬೆನ್ನು ನೋವಿನ ಸಮಸ್ಯೆಯೇ, ಈ ಆಹಾರ ಸೇವಿಸಿ, ನೋವಿನಿಂದ ದೂರವಿರಿ.
ಮೆಂತೆ ಸೇವನೆಯಿಂದ ದೇಹದಲ್ಲಿ ಮೂಳೆಗಳಿಗೆ ಬೇಕಾದ ಲುಬ್ರಿಕ್ಯಾಂಟ್ ಉತ್ಪನ್ನ ಹೆಚ್ಚಾಗುತ್ತದೆ. ಒಂದು ಬಟ್ಟಲು ಮೆಂತೆಯನ್ನು ಸ್ವಲ್ಪ ನೀರಿನಲ್ಲಿ ನೆನೆಸಿ. ಬೆಳಗ್ಗೆ ಈ ಮೆಂತೆಯನ್ನು ಕುದಿಸಿ, ಸೋಸಿ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ನಂತರ ಉಳಿದ ಮೆಂತೆಯನ್ನು ಹಾಗೆ ರುಬ್ಬಿ ತಿನ್ನಬೇಕು.
ಕ್ಯಾಲ್ಸಿಯಂ ಕೊರತೆ ಆಗದಂತೆ ಹಾಲನ್ನು ಸೇವನೆ ಮಾಡಲೇಬೇಕು. ಕುಡಿಯುವ ಮುನ್ನ ಚಿಟಿಕೆ ಅರಿಶಿಣ ಪುಡಿ ಹಾಕಿ ಕುಡಿಯುವುದು ಒಳ್ಳೆಯದು.
ಖರ್ಜೂರ ಮತ್ತು ಬೆಲ್ಲವನ್ನು ಸೇವನೆ ಮಾಡುವುದರಿಂದ ಐರನ್ ಅಂಶ ಉತ್ಪತ್ತಿ ಆಗುತ್ತದೆ. ದೇಹಕ್ಕೆ ಬೇಕಾದ ನ್ಯುಟ್ರಿಷಿಯನ್ ಪ್ರೋಟಿನ್ ಇದರಲ್ಲಿ ಸಿಗುತ್ತದೆ. ಬೆಲ್ಲ ತಿನ್ನುವುದರಿಂದ ಮೂಳೆಗಳು ಗಟ್ಟಿ ಆಗುತ್ತವೆ. ಖರ್ಜೂರ ದೇಹಕ್ಕೆ ಬೇಕಾದ ಹಲವಾರು ಪ್ರೋಟಿನ್ ಗಳನ್ನ ಒದಗಿಸುತ್ತದೆ. ಮೂಳೆಗಳಿಗೆ ಬೇಕಾದ ಲ್ಯುಬ್ರಿಕೆಂಟ್ ಅನ್ನು ಉತ್ಪಾದಿಸುತ್ತದೆ. ಇದು ಹೆಚ್ಚಾದಂತೆ ಮೂಳೆಗಳ ಸವೆತ ಕಡಿಮೆಯಾಗುತ್ತದೆ.