ಬಾಯಲ್ಲಿ ಬೆಣ್ಣೆಯಂತೆ ಕರಗುವ ಬೆಣ್ಣೆ ಬಿಸ್ಕೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.
ಮಕ್ಕಳಿಗಂತೂ ಇದು ತುಂಬಾ ಅಚ್ಚುಮೆಚ್ಚು. ಹಾಗಂತ ಇದನ್ನು ಮಾಡುವುದು ತುಂಬಾ ಕಷ್ಟದ ಕೆಲಸವಲ್ಲ. ತುಂಬಾ ಕಡಿಮೆ ಸಮಯದಲ್ಲಿ ಈ ರುಚಿಕರವಾದ ಬೆಣ್ಣೆ ಬಿಸ್ಕೇಟ್ ಅನ್ನು ಮಾಡಬಹುದು.
ಬೇಕಾಗುವ ಸಾಮಾಗ್ರಿಗಳು: 125 ಗ್ರಾಂ-ಬೆಣ್ಣೆ, ½ ಕಪ್ ಕ್ಯಾಸ್ಟರ್ ಶುಗರ್, ½ ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್, 1 ಮೊಟ್ಟೆ, 2 ಕಪ್- ಮೈದಾ ಹಿಟ್ಟು, 1 ಟೀ ಸ್ಪೂನ್ ಬೇಕಿಂಗ್ ಪೌಡರ್, 1 ಟೇಬಲ್ ಸ್ಪೂನ್ ಹಾಲು, 2 ಟೇಬಲ್ ಸ್ಪೂನ್ ಐಸಿಂಗ್ ಶುಗರ್.
ಬಂದ್ ಆದ ಸಹಕಾರಿ ಸಕ್ಕರೆ ಕಾರ್ಖಾನೆ; ಕೆಲಸ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಕಾರ್ಮಿಕ
ಮಾಡುವ ವಿಧಾನ: ಮೊದಲು ಬೆಣ್ಣೆ, ಶುಗರ್ ವೆನಿಲ್ಲಾ ಎಸೆನ್ಸ್ ಅನ್ನು ಒಂದು ಬೌಲ್ ಗೆ ಹಾಕಿ ಇದನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಈ ಮಿಶ್ರಣ ಕ್ರೀಂ ನ ಹದಕ್ಕೆ ಬರುವ ಹಾಗೇ ಮಾಡಿ. ನಂತರ ಇದಕ್ಕೆ ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಇದಕ್ಕೆ ಗಾಳಿಸಿಟ್ಟುಕೊಂಡ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಚಿಕ್ಕ ಚಿಕ್ಕ ಉಂಡೆ ಕಟ್ಟುವ ಹದಕ್ಕೆ ಬರುವ ಹಾಗೇ ಹಿಟ್ಟನ್ನು ನಾದಿಕೊಳ್ಳಿ. ನಂತರ ಚಿಕ್ಕ ಚಿಕ್ಕ ಉಂಡೆ ತರ ಮಾಡಿ ನಿಧಾನಕ್ಕೆ ಅಂಗೈಯಲ್ಲಿ ಒತ್ತಿ ಬೇಕಿಂಗ್ ಟ್ರೈ ನಲ್ಲಿಡಿ. ಓವೆನ್ ಅನ್ನು 180 ಡಿಗ್ರಿಯಲ್ಲು ಪ್ರೀ ಹೀಟ್ ಮಾಡಿಟ್ಟುಕೊಳ್ಳಿ.
ನಂತರ ಬೇಕಿಂಗ್ ಟ್ರೆ ಅನ್ನು ಇಟ್ಟು 15 ನಿಮಿಷ ಬಿಟ್ಟು ತೆಗೆಯಿರಿ. ತಣ್ಣಗಾದ ನಂತರ ಒಂದು ಪಾತ್ರೆಗೆ ಹಾಕಿ ಅದರ ಮೇಲೆ ಐಸಿಂಗ್ ಶುಗರ್ ಅನ್ನು ಚಿಮುಕಿಸಿ.