alex Certify ಬೆಚ್ಚಿ ಬೀಳಿಸುತ್ತೆ ತಲೆನೋವಿನ ಬಗ್ಗೆ ಬಹಿರಂಗವಾಗಿರೋ ಈ ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುತ್ತೆ ತಲೆನೋವಿನ ಬಗ್ಗೆ ಬಹಿರಂಗವಾಗಿರೋ ಈ ವರದಿ

ತಲೆನೋವು ಬಹುದೊಡ್ಡ ಆರೋಗ್ಯ ಸಮಸ್ಯೆ. ತಲೆನೋವು ಬಂತಂದ್ರೆ ಜೀವನವೇ ಬೇಡ ಎನಿಸುವಷ್ಟು ಕಷ್ಟವಾಗುತ್ತದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ವಿಶ್ವದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.52 ಕ್ಕಿಂತ ಹೆಚ್ಚು ಜನರು ತಲೆನೋವಿನಿಂದ ಬಳಲ್ತಾರೆ. ಇದರಲ್ಲಿ ಶೇ.14ರಷ್ಟು ಮೈಗ್ರೇನ್‌ ಪ್ರಕರಣಗಳೇ ಇವೆ.

ಇನ್ನೊಂದು ಆಘಾತಕಾರಿ ಅಂಶವೆಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ತಲೆನೋವಿನ ಸಮಸ್ಯೆ ಅನುಭವಿಸ್ತಿದ್ದಾರೆ. ತಲೆನೋವಿನ ಸಮಸ್ಯೆಯು ಪ್ರಪಂಚದಾದ್ಯಂತ 20 ರಿಂದ 65 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 1961 ರಿಂದ 2020ರ ನಡುವೆ ಪ್ರಕಟವಾದ ವರದಿಗಳ ಆಧಾರದ ಮೇಲೆ ಸಂಶೋಧಕರು ತಲೆನೋವಿನ ಸಮಸ್ಯೆಯನ್ನು ನಿರ್ಣಯಿಸಿದ್ದಾರೆ.

ಸುಮಾರು 26 ಪ್ರತಿಶತದಷ್ಟು ಜನರು ಉದ್ವೇಗ-ಸಂಬಂಧಿತ ತಲೆನೋವಿನಿಂದ ಬಳಲುತ್ತಿದ್ದಾರೆ. ಶೇ.4.6ರಷ್ಟು ಮಂದಿ ಪ್ರತಿ ತಿಂಗಳು 15 ಅಥವಾ ಅದಕ್ಕಿಂತ ಹೆಚ್ಚಿನ ದಿನಗಳು ತಲೆನೋವಿನಿಂದ ಹೈರಾಣಾಗ್ತಿದ್ದಾರಂತೆ. ಸುಮಾರು ಶೇ.15.8ರಷ್ಟು ಜನರು ಕೆಲವು ಹಂತದಲ್ಲಿ ತಲೆನೋವು ಅನುಭವಿಸ್ತಾರೆ. ಈ ಪೈಕಿ ಸುಮಾರು 50 ಪ್ರತಿಶತದಷ್ಟು ಜನರು ಮೈಗ್ರೇನ್ ನಿಂದ ತೊಂದರೆಗೊಳಗಾಗ್ತಾರೆ.

ತಲೆನೋವು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಉತ್ತಮ ಮಾರ್ಗಗಳನ್ನು ಕಂಡುಹಿಡಿಯುವ ಅವಶ್ಯಕತೆಯಿದೆ. ಮಹಿಳೆಯರೇ ಹೆಚ್ಚು ತಲೆನೋವಿನಿಂದ ಸಮಸ್ಯೆಗೊಳಗಾಗಿದ್ದಾರೆ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಶೇ.17ರಷ್ಟು ಮಹಿಳೆಯರಲ್ಲಿ ತಲೆನೋವಿನ ಸಮಸ್ಯೆ ಇದ್ರೆ, ಶೇ.8.6ರಷ್ಟು ಪುರುಷರು ಮಾತ್ರ ಈ ತೊಂದರೆ ಅನುಭವಿಸ್ತಿದ್ದಾರೆ.

6 ಪ್ರತಿಶತದಷ್ಟು ಮಹಿಳೆಯರು ತಿಂಗಳಲ್ಲಿ 15 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ತಲೆನೋವು ಎಂದು ದೂರುತ್ತಾರೆ. ಆದರೆ ಈ ರೀತಿ ಸಮಸ್ಯೆ ಇರುವ ಪುರುಷರ ಸಂಖ್ಯೆ ಶೇ.2.9ರಷ್ಟು ಮಾತ್ರವಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...