ವಿಶ್ವದ ಇಥಿಯೋಪಿಯಾ, ದಕ್ಷಿಣ ಸುಡಾನ್, ಸಿರಿಯಾ ಮೊದಲಾದ ರಾಷ್ಟ್ರಗಳು ಈ ಮೊದಲೇ ಬಡತನದಿಂದ ತತ್ತರಿಸಿ ಹೋಗಿದ್ದವು. ಗಾಯದ ಮೇಲೆ ಬರೆ ಎಳೆದಂತೆ ಬಂದ ಕೊರೊನಾ ಮಹಾಮಾರಿ ಆರ್ಥಿಕತೆಯನ್ನು ಮತ್ತಷ್ಟು ಅಧೋಗತಿಗೆ ತಳ್ಳಿದೆ. ಹೀಗಾಗಿ ಬಡವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬರುತ್ತಿದೆ.
ಇದರ ಮಧ್ಯೆ ‘ಆಕ್ಸ್ ಫ್ಯಾಮ್’ ಎಂಬ ಸಂಸ್ಥೆ ವಿಶ್ವದಲ್ಲಿ ಪ್ರತಿ ನಿಮಿಷಕ್ಕೆ ಹಸಿವಿನಿಂದ ಸಾವನ್ನಪ್ಪುತ್ತಿರುವವರ ಕುರಿತು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ ವಿಶ್ವದಾದ್ಯಂತ ಪ್ರತಿ ನಿಮಿಷಕ್ಕೆ 11 ಮಂದಿ ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ ಎನ್ನಲಾಗಿದೆ.
ಈ ಸಂಖ್ಯೆ ವಿಶ್ವದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಗಿಂತ ಅಧಿಕವಾಗಿದ್ದು, ಕೊರೊನಾದಿಂದ ಪ್ರತಿ ನಿಮಿಷಕ್ಕೆ ಏಳು ಜನ ಸಾವಿಗೀಡಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಕೊರೊನಾ ಕಾರಣಕ್ಕೆ ಆರ್ಥಿಕತೆ ಕುಸಿದಿರುವುದರಿಂದ ಹಸಿವಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.