ಅನೇಕ ಜನರಿಗೆ ಮೈತುಂಬಾ ಟ್ಯಾಟುಗಳು, ದೇಹವನ್ನು ಚುಚ್ಚುವುದರ ಮೂಲಕ ಮಾರ್ಪಾಡು ಮಾಡಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಅದೇ ರೀತಿ ಈ ಜರ್ಮನಿ ಮೂಲದ ವ್ಯಕ್ತಿಯೊಬ್ಬರು ದೇಹದ ಮಾರ್ಪಾಡಿನ ಬಗ್ಗೆ ಎಷ್ಟು ಗೀಳನ್ನು ಹೊಂದಿದ್ದಾರೆಂದರೆ ಅವರು ಅತಿ ಹೆಚ್ಚು ದೇಹದ ಮಾರ್ಪಾಡುಗಳಿಗಾಗಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ.
ಹೌದು, ರೋಲ್ಫ್ ಬುಚೋಲ್ಜ್ ಎಂದು ಗುರುತಿಸಲಾದ ವ್ಯಕ್ತಿ 516 ಕ್ಕೂ ಹೆಚ್ಚು ಮಾರ್ಪಾಡುಗಳನ್ನು ದೇಹದಲ್ಲಿ ಮಾಡಿದ್ದಾನೆ. ಇಷ್ಟಾದರೂ ಆತ ಇನ್ನೂ ತನ್ನ ದೇಹವನ್ನು ಸಂಪೂರ್ಣವಾಗಿ ಬದಲಾಯಿಸಲಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾನೆ.
ಗಿನ್ನಿಸ್ ವಿಶ್ವ ದಾಖಲೆಯ ಪ್ರಕಾರ, 62 ವರ್ಷದ ಬುಚೋಲ್ಜ್ ಅವರ ಜನನಾಂಗಗಳ ಮೇಲೆ 278 ಸೇರಿದಂತೆ ಒಟ್ಟು ದೇಹದ ಮೇಲೆ 516 ಚುಚ್ಚುವಿಕೆಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಅವರು ಹಾರ್ನ್ ಇಂಪ್ಲಾಂಟ್‌ಗಳು, ಹಚ್ಚೆ ಹಾಕಿಸಿಕೊಂಡ ಕಣ್ಣುಗುಡ್ಡೆಗಳು, ಒಡೆದ ನಾಲಿಗೆ ಮತ್ತು ಬೆರಳ ತುದಿಯಲ್ಲಿ ಆಯಸ್ಕಾಂತಗಳನ್ನು ಹೊಂದಿದ್ದಾನೆ. ಅದು ನೋಯುವುದಿಲ್ಲವೇ ಎಂದು ಆತನಲ್ಲಿ ಕೇಳಿದ್ರೆ ಇಲ್ಲ ಎಂಬುದಾಗಿ ಹೇಳುತ್ತಾನೆ. ಆದರೂ, ಅತ್ಯಂತ ನೋವಿನ ಅನುಭವವೆಂದರೆ ಪಾಮ್ ಟ್ಯಾಟೂ ಎಂಬುದಾಗಿ ಒಪ್ಪಿಕೊಂಡಿದ್ದಾನೆ.
ತನ್ನ ಅತ್ಯಂತ ಪ್ರಸಿದ್ಧ ದೇಹದ ಮಾರ್ಪಾಡೆಂದರೆ ಅದು ತನ್ನ ಕೊಂಬಿನ ಕಸಿ ಎಂದು ಹೇಳಿದ್ದಾನೆ. ಈತ ತನ್ನ ಹಣೆಯ ಮೇಲೆ ಎರಡು ಕೊಂಬುಗಳನ್ನು ಸಹ ಮಾಡಿಸಿಕೊಂಡಿದ್ದಾನೆ. ಅದಕ್ಕಿಂತ ಹೆಚ್ಚಾಗಿ ಆತ ಬಹಳಷ್ಟು ಇಂಪ್ಲಾಂಟ್‌ಗಳನ್ನು ಹೊಂದಿದ್ದಾನಂತೆ. ತೋಳುಗಳ ಮೇಲೆ ಮತ್ತು ಕೈಯ ಹಿಂಭಾಗದಲ್ಲಿ ಬಹಳ ಇಂಪ್ಲಾಂಟ್‌ಗಳನ್ನು ಹೊಂದಿದ್ದಾನೆ.
ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ, ರೋಲ್ಫ್ ಜರ್ಮನಿಯ ಟೆಲಿಕಾಂ ಕಂಪನಿಯಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಾನೆ. ರೋಲ್ಫ್ ತನ್ನ 40ನೇ ವಯಸ್ಸಿನಲ್ಲಿ ತನ್ನ ಮೊದಲ ಹಚ್ಚೆ ಮತ್ತು ಚುಚ್ಚುವಿಕೆಯನ್ನು ಪಡೆದಾಗ ದೇಹದ ಮಾರ್ಪಾಡಿನತ್ತ ಗಮನಹರಿಸಲು ಪ್ರಾರಂಭಿಸಿದ್ದಾನೆ.