ಎರಡು ವರ್ಷಗಳ ಹಿಂದೆ ದೇಶದಲ್ಲಿ ವಕ್ಕರಿಸಿದ ಕೊರಾನಾ ಮಹಾಮಾರಿ ಲಕ್ಷಾಂತರ ಮಂದಿಯ ಜೀವ ತೆಗೆದಿದ್ದರೆ ಜೊತೆಗೆ ಬದುಕಿರುವವರ ಜೀವನವನ್ನೂ ಸಹ ಹಾಳು ಮಾಡಿದೆ. ಈ ಸೋಂಕಿನಿಂದಾಗಿ ದೇಶದಲ್ಲಿ ಈವರೆಗೆ ಐದು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ಸರ್ಕಾರಿ ಅಂಕಿ-ಅಂಶಗಳು ಹೇಳುತ್ತಿವೆ.
ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿರುವ ಲೆಕ್ಕ ಮಾತ್ರ ಬೆಚ್ಚಿಬೀಳಿಸುವಂತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೊನಾದಿಂದಾಗಿ ಭಾರತದಲ್ಲಿ 47 ಲಕ್ಷ ಮಂದಿ ಸಾವನ್ನಪ್ಪಿದ್ದಾರಂತೆ. ಆದರೆ ವಾಸ್ತವದಲ್ಲಿ ಸೋಂಕಿನ ಸಾವನ್ನು ಕಡೆಗಣಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವದ ಇತರೆ ದೇಶಗಳು ಸಹ ಕೊರೊನಾದಿಂದಾಗಿ ಅತಿ ಹೆಚ್ಚು ಸಾವುಗಳು ಸಂಭವಿಸಿದ್ದರೂ ಕಡಿಮೆ ಲೆಕ್ಕ ತೋರಿಸಿವೆ ಎಂಬುದು ವಿಶ್ವಸಂಸ್ಥೆಯ ಹೇಳಿಕೆಯಾಗಿದೆ. ಭಾರತದಲ್ಲಿನ ಸಾವುಗಳ ಕುರಿತ ವಿಶ್ವಸಂಸ್ಥೆ ಹೇಳಿಕೆಗೆ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಈ ಹೇಳಿಕೆಗೆ ಆಧಾರವೇನು ಎಂದು ಪ್ರಶ್ನಿಸಿದೆ.