alex Certify ಬೆಚ್ಚಿಬೀಳಿಸುವಂತಿದೆ ಇಂಡೋನೇಷ್ಯಾದ ಈ ಬುಡಕಟ್ಟು ಜನಾಂಗದ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಇಂಡೋನೇಷ್ಯಾದ ಈ ಬುಡಕಟ್ಟು ಜನಾಂಗದ ಆಚರಣೆ

ಜಗತ್ತು ಬಹಳ ಮುಂದುವರಿದಿದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಹೊಸ-ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಆದರೂ ಜಗತ್ತಿನ ಹಲವೆಡೆ ಮೂಢನಂಬಿಕೆಗಳು ಚಾಲ್ತಿಯಲ್ಲಿವೆ. ಹಲವಾರು ಜನಾಂಗಗಳು ಇನ್ನೂ ತಮ್ಮ ಜೀವನ ಪದ್ಧತಿಯಂತೆ ಜೀವನ ಸಾಗಿಸುತ್ತಿದ್ದಾರೆ. ಇದೇ ರೀತಿ ಇಂಡೋನೇಷ್ಯಾದ ಬುಡಕಟ್ಟು ಜನಾಂಗವೊಂದು ಇನ್ನೂ ಕೂಡ ನರಭಕ್ಷಕತೆಯನ್ನು ಪೋಷಿಸುತ್ತಿವೆ.

ಹೌದು, ಇಲ್ಲಿನ ಬುಡಕಟ್ಟು ಸಮುದಾಯವೊಂದು ಮಾನವನ ತಲೆಗಳನ್ನು ತಿನ್ನುತ್ತಾರೆ. ಈ ಬುಡಕಟ್ಟು ಜನಾಂಗವನ್ನು ಅಸ್ಮತ್ ಎಂದು ಕರೆಯಲಾಗುತ್ತದೆ. ಇದು 12 ಉಪ ಜನಾಂಗೀಯ ಗುಂಪುಗಳನ್ನು ಒಳಗೊಂಡಿದ್ದು, ಸುಮಾರು 65,000 ಜನಸಂಖ್ಯೆಯನ್ನು ಹೊಂದಿದ್ದಾರೆ.

ಅಂದಹಾಗೆ, ಈ ನರಭಕ್ಷಕ ಬುಡಕಟ್ಟಿಗೆ ಸೇರಿದ ಪುರುಷರು ಆಗಾಗ್ಗೆ ತಮ್ಮ ಶತ್ರುಗಳನ್ನು ಬೇಟೆಯಾಡಿ ಕೊಲ್ಲುತ್ತಾರೆ. ಸಮುದಾಯದ ಸಂಪ್ರದಾಯದಂತೆ ಶತ್ರುಗಳನ್ನು ಕೊಂದು ಅವರ ತಲೆಯನ್ನು ತಿನ್ನುತ್ತಾರೆ. ಅಷ್ಟೇ ಅಲ್ಲ, ತಲೆಬುರುಡೆಯನ್ನು ಅರ್ಧಕ್ಕೆ ಕತ್ತರಿಸಿ ಬಟ್ಟಲುಗಳಾಗಿಯೂ ಬಳಸುತ್ತಾರೆ. ತಲೆಯ ಮೇಲಿನ ಚರ್ಮವನ್ನು ಕಿತ್ತುಹಾಕಲಾಗುತ್ತದೆ. ನಂತರ, ತಲೆಯನ್ನು ಬೇಯಿಸಿ ತಮ್ಮ ಜನರಿಗೆ ಹಂಚಲಾಗುತ್ತದೆ. ಅವರು ಕೊಲ್ಲುವ ಮಾನವ ಶತ್ರುಗಳ ದವಡೆಯ ಭಾಗಗಳು ಮತ್ತು ಬೆನ್ನುಮೂಳೆಯನ್ನು ಆಭರಣಗಳಾಗಿ ಬಳಸಲಾಗುತ್ತದೆ. ಅವುಗಳನ್ನು ತಮ್ಮ ಪುರುಷತ್ವದ ಸಂಕೇತವಾಗಿ ಅಲಂಕರಿಸುತ್ತಾರೆ.

ಅಸ್ಮತ್ ಬುಡಕಟ್ಟಿನ ಜನರು ಇಂತಹ ಅತಿರೇಕದ ಆಚರಣೆಗಳನ್ನು ಮಾಡುತ್ತಾರೆ. ಅವರು ಮನುಷ್ಯನನ್ನು ಮರದೊಂದಿಗೆ ಹೋಲಿಸುತ್ತಾರೆ. ಹಾಗೂ ಮನುಷ್ಯನ ತಲೆಯನ್ನು ಹಣ್ಣು ಎಂದು ಕರೆಯುತ್ತಾರೆ. ಅಸ್ಮತ್ ಬುಡಕಟ್ಟಿನಲ್ಲಿ ತಮ್ಮ ಲೈಂಗಿಕ ಸಾಮರ್ಥ್ಯ ಅಥವಾ ರಕ್ತಸಂಬಂಧವನ್ನು ತೋರಿಸಲು ಮಾನವ ಶತ್ರುಗಳ ಹತ್ಯೆಯನ್ನು ಸಹ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಒಬ್ಬ ಮನುಷ್ಯನನ್ನು ಕೊಂದು ತಿಂದ ನಂತರ, ಸತ್ತವರ ಶಕ್ತಿಗಳು ಮತ್ತು ಕೌಶಲ್ಯಗಳನ್ನು ಅವರಿಗೆ ವರ್ಗಾಯಿಸಲಾಗುತ್ತದೆ ಎಂದು ಅವರು ನಂಬುತ್ತಾರೆ.

ಇಂಡೋನೇಷಿಯಾದ ನ್ಯೂಗಿನಿಯಾದ ಪ್ರದೇಶಗಳಲ್ಲಿ ಸುಮಾರು 25,000 ಚದರ ಕಿ.ಮೀ. ವಿಸ್ತೀರ್ಣದಲ್ಲಿ ವ್ಯಾಪಿಸಿರುವ ತಗ್ಗು ಪ್ರದೇಶದ ಜೌಗು ಪ್ರದೇಶಗಳಲ್ಲಿ ಬುಡಕಟ್ಟು ವಾಸಿಸುತ್ತಿದೆ. ಉದ್ಯಮಿ ಜಾನ್ ಡಿ. ರಾಕ್‌ಫೆಲ್ಲರ್ ಅವರ ಮೊಮ್ಮಗ ಮೈಕೆಲ್ ರಾಕ್‌ಫೆಲ್ಲರ್ ಅವರ ಸಾವಿನ ಹಿಂದೆ ಅಸ್ಮತ್ ಜನಾಂಗದ ಪಾತ್ರವಿದೆ ಎಂಬ ಆರೋಪ ಕೇಳಿಬಂದ ನಂತರ ಬುಡಕಟ್ಟು ಜನಾಂಗದ ಈ ಆಚರಣೆ ಬೆಳಕಿಗೆ ಬಂದಿತು.

ಸೇವೇಜ್ ಹಾರ್ವೆಸ್ಟ್: ಎ ಟೇಲ್ ಆಫ್ ಕ್ಯಾನಿಬಲ್ಸ್, ವಸಾಹತುಶಾಹಿ ಮತ್ತು ಮೈಕೆಲ್ ರಾಕ್‌ಫೆಲ್ಲರ್‌ನ ಟ್ರ್ಯಾಜಿಕ್ ಕ್ವೆಸ್ಟ್ ಫಾರ್ ಪ್ರಿಮಿಟಿವ್ ಆರ್ಟ್ ಎಂಬ ಪುಸ್ತಕವನ್ನು ಬರೆದ ಅಮೆರಿಕಾದ ಪತ್ರಕರ್ತ ಕಾರ್ಲ್ ಹಾಫ್‌ಮನ್ ಅವರು ಈ ರೀತಿ ಉಲ್ಲೇಖಿಸಿದ್ದಾರೆ. ಆದರೆ, ಇದನ್ನು ಇಂದಿಗೂ ದೃಢೀಕರಿಸಲಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...