ದೇಶದಲ್ಲಿ ಮಹಾಮಾರಿಗೆ ವರದಿಯಾಗಿರುವ ಸಂಖ್ಯೆಗಿಂತ ಆರೇಳು ಪಟ್ಟು ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಈ ಕುರಿತು ಎರಡು ಸ್ವತಂತ್ರ ಅಧ್ಯಯನಗಳು ತಿಳಿಸಿದ್ದು, ಒಂದು ಅಧ್ಯಯನವು ಮಾರ್ಚ್ 2020ರಿಂದ ಜುಲೈ 2021ರ ಅವಧಿಯಲ್ಲಿ ಈ ಅಧ್ಯಯನ ನಡೆದಿದ್ದು, ಮಾಹಿತಿ ಸಂಗ್ರಹಿಸಲಾಗಿತ್ತು.
ದೇಶದಲ್ಲಿ 2021ರಲ್ಲಿಯೇ ಹೆಚ್ಚಿನ ಸಾವು ಸಂಭವಿಸಿವೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ದಾಖಲೆಯಲ್ಲಿ ಸರಿಯಾಗಿಲ್ಲ. ದೀರ್ಘ ಕಾಲದ ರೋಗ ಸೇರಿದಂತೆ ಅನೇಕ ಕಾರಣಗಳನ್ನು ನೀಡಲಾಗಿದೆ ಎಂದು ವರದಿ ಹೇಳಿದೆ. ಅಧ್ಯಯನದ ಪ್ರಕಾರ ದೇಶದಲ್ಲಿ 2021ರ ಜೂನ್ ವರೆಗೆ ಸಾವನ್ನಪ್ಪಿದವರ ಸಂಖ್ಯೆ 40 ಲಕ್ಷ ಎಂದು ವರದಿ ಹೇಳಿದೆ.
ಇನ್ನೊಂದು ಅಧ್ಯಯನ ಕೆನಡಾದ ಟೊರೆಂಟೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರಭಾತ್ ಝಾ ಅವರ ನೇತೃತ್ವದಲ್ಲಿ ನಡೆದಿತ್ತು. ಜೂನ್ 202ರಿಂದ ಜುಲೈ 2021ರವರೆಗೆ ಭಾರತದಲ್ಲಿ 32 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಶೇ.29ರಷ್ಟು ಸಾವುಗಳು ಕೋವಿಡ್ ನಿಂದಲೇ ಸಂಭವಿಸಿವೆ ಎಂದು ಅಧ್ಯಯನ ಹೇಳಿದೆ.