
ಹರಿಯಾಣ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. 30 ಪ್ರಕರಣಗಳಲ್ಲಿ ಬೇಕಾಗಿದ್ದ ನಟೋರಿಯಸ್ ಕ್ರಿಮಿನಲ್ ಒಬ್ಬನ ಹೆಡೆಮುರಿ ಕಟ್ಟಿದ್ದಾರೆ. ಇವನ ಬಳಿಯಿದ್ದ ದೇಸಿ ಪಿಸ್ತೂಲ್ ಒಂದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನ ಹೆಸರು ಇಕ್ರಂ, ನುಹ್ ಜಿಲ್ಲೆಯ ಸಿಗಾರ್ ಎಂಬ ಪ್ರದೇಶದ ನಿವಾಸಿ.
ಇವನ ಹಿನ್ನೆಲೆ ಕೇಳಿದ್ರೆ ಎಂಥವರಾದ್ರೂ ಬೆಚ್ಚಿ ಬೀಳ್ತಾರೆ. ದರೋಡೆ, ಡಕಾಯಿತಿ, ಕೊಲೆಯತ್ನ, ಗೋಹತ್ಯೆ, ಎಟಿಎಂನಿಂದ ಹಣ ಲೂಟಿ ಹೀಗೆ ಎಲ್ಲಾ ಬಗೆಯ ಅಕ್ರಮಗಳನ್ನೂ ಈತ ಎಸಗಿದ್ದಾನೆ.
ಹರಿಯಾಣ, ಗುಜರಾತ್, ಉತ್ತರ ಪ್ರದೇಶ, ರಾಜಸ್ತಾನ ಹಾಗೂ ಪಶ್ಚಿಮ ಬಂಗಾಳದಲ್ಲಿ ಈತನ ಮೇಲೆ ಪ್ರಕರಣಗಳಿವೆ. ಈ ಐದೂ ರಾಜ್ಯದ ಪೊಲೀಸರು ಮೋಸ್ಟ್ ವಾಂಟೆಡ್ ಇಕ್ರಂಗಾಗಿ ಬಲೆ ಬೀಸಿದ್ದರು.
ಹರಿಯಾಣದಲ್ಲಿ 11, ಉತ್ತರ ಪ್ರದೇಶದಲ್ಲಿ 12, ಗುಜರಾತ್ ನಲ್ಲಿ 2 ಹಾಗೂ ರಾಜಸ್ತಾನ, ಪಶ್ಚಿಮ ಬಂಗಾಳದಲ್ಲಿ ತಲಾ 3 ಕೇಸ್ ಗಳು ಇವನ ವಿರುದ್ಧ ದಾಖಲಾಗಿದ್ದವು.