ಮನೆಯಲ್ಲಿ ಸಾಕುವ ಬೆಕ್ಕಿನ ಆಹಾರದ ಕುರಿತು ಹೆಚ್ಚಿನ ಕಾಳಜಿ ಅತ್ಯಗತ್ಯ. ಇಲ್ಲದಿದ್ದರೆ ಅದು ಅನಾರೋಗ್ಯಕ್ಕೆ ಈಡಾಗಬಹುದು. ಬೆಕ್ಕಿಗೆ ಏನು ಕೊಡಬೇಕು ಏನು ಕೊಡಬಾರದು ಅನ್ನುವ ಮಾಹಿತಿ ಇಲ್ಲಿದೆ.
* ಕೆಲವರು ಬೆಕ್ಕಿಗೆ ಚಾಕ್ಲೇಟ್ ತಿನ್ನಿಸುತ್ತಾರೆ. ಇದು ತಪ್ಪು. ಚಾಕ್ಲೇಟ್ ನಲ್ಲಿ ಥಿಯೋಬ್ರೊಮೈನ್ ಎಂಬ ಅಂಶವು ಬೆಕ್ಕುಗಳ ಪಾಲಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಇದನ್ನು ನೀಡಿದರೆ ಬೆಕ್ಕಿಗೆ ಹೃದಯ ಸಂಬಂಧಿ ತೊಂದರೆಗಳು ಕಾಡುತ್ತವೆ.
* ಬೆಕ್ಕುಗಳಿಗೆ ತುಂಬಾ ಮುಳ್ಳುಗಳಿರುವ ಮೀನುಗಳನ್ನು ಕೊಡಬೇಡಿ. ಕೆಲವು ಮೀನುಗಳ ಮುಳ್ಳು ಅವುಗಳ ಗಂಟಲಿಗೆ ಸಿಕ್ಕಿಕೊಂಡು ಸಮಸ್ಯೆಯಾಗುತ್ತದೆ.
* ಹಸಿ ಮೊಟ್ಟೆ ನೀಡಿದರೆ ಬೆಕ್ಕುಗಳ ಮಿದುಳಿಗೆ ಹಾನಿಯಾಗುತ್ತದೆ. ಮೊಟ್ಟೆಯನ್ನು ಬೇಯಿಸಿ ನೀಡಿದರೆ ಉತ್ತಮ.
* ಬೆಕ್ಕುಗಳು ಅಣಬೆ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು ಕಾಡುತ್ತವೆ.
* ಹಸಿರು ಟೊಮ್ಯಾಟೋಗಳು ಬೆಕ್ಕಿಗೆ ಹೊಟ್ಟೆ ನೋವನ್ನು ಉಂಟು ಮಾಡುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಹಸಿರು ಟೊಮ್ಯಾಟೋ ಕೊಡಬೇಡಿ.
* ಬೆಳ್ಳುಳ್ಳಿ ಮತ್ತು ಈರುಳ್ಳಿಯ ಸೇವನೆಯಿಂದ ಬೆಕ್ಕುಗಳಲ್ಲಿ ರಕ್ತಹೀನತೆ ಉಂಟಾಗುತ್ತದೆ. ಅದರ ದೇಹದಲ್ಲಿ ರಕ್ತ ಕಡಿಮೆಯಾಗುತ್ತಾ ಬರುತ್ತದೆ.