ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಂದು ಎಡವಟ್ಟು ಮಾಡಿದ್ದು, ವಿದ್ಯಾರ್ಥಿಗಳು ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ಕಾಂ 5ನೇ ಸೆಮಿಸ್ಟರ್ ಅಡ್ವಾನ್ಸ್ ಅಕೌಂಟಿಂಗ್ ಪರೀಕ್ಷೆಯನ್ನು ಏಪ್ರಿಲ್ 5ರಂದು ನಿಗದಿ ಪಡಿಸಿ ಇದೀಗ ಏಪ್ರಿಲ್ 1ರಂದೇ ಪರೀಕ್ಷೆ ನಡೆಸಲಾಗಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಜತೆ ವಿಶ್ವ ವಿದ್ಯಾಲಯ ಚಲ್ಲಾಟವಾಡುತ್ತಿದೆ ಇದರಿಂದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
BIG NEWS: ಮಂಡ್ಯದ ಮುಸ್ಕಾನ್ ಭಾರತದ ಶ್ರೇಷ್ಠ ಮಹಿಳೆ; ಶಹಬಾಸ್ ಗಿರಿ ನೀಡಿದ ಮೋಸ್ಟ್ ವಾಂಟೆಡ್ ಉಗ್ರ ಅಲ್ ಜವಾಹಿರಿ
ಏಪ್ರಿಲ್ 5ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಮಾಹಿತಿ ನೀಡದೇ ಮೊದಲೇ ಮುಗಿಸಿದ್ದರಿಂದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ಇಲ್ಲದಾಗಿದೆ. ಒಂದು ವೇಳಾ ಪಟ್ಟಿಯನ್ನು ಪ್ರಕಟಿಸಿ ಬಳಿಕ ಮುಂಚಿತವಾಗಿ ಪರೀಕ್ಷೆ ಮುಗಿಸಲು ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ. ವಿಶ್ವವಿದ್ಯಾಲಯ ಪ್ರತಿಬಾರಿ ಒಂದಲ್ಲ ಒಂದು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯುಂಟುಮಾಡುತ್ತಿದ್ದು, ಈ ಬೇಜವಾಬ್ದಾರಿಗೆ ಉತ್ತರಿಸುವವರು ಯಾರು ಎಂದು ಕಿಡಿಕಾರಿದ್ದಾರೆ.