alex Certify ಬೆಂಗಳೂರು ವಾಹನ ಸವಾರರಿಗೆ ಸರ್ವೇ ಶಾಕ್….! ಹತ್ತು ಕಿ.ಮೀ. ಪ್ರಯಾಣಿಸಲು ಬೇಕು ಅರ್ಧ ಗಂಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ವಾಹನ ಸವಾರರಿಗೆ ಸರ್ವೇ ಶಾಕ್….! ಹತ್ತು ಕಿ.ಮೀ. ಪ್ರಯಾಣಿಸಲು ಬೇಕು ಅರ್ಧ ಗಂಟೆ

ಬೆಂಗಳೂರಲ್ಲಿ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಕಾಡುವ ಸಮಸ್ಯೆಯೆಂದರೆ ಟ್ರಾಫಿಕ್ ಸಮಸ್ಯೆ. ಮೆಟ್ರೋ ವ್ಯವಸ್ಥೆ ಬಂದ್ರೂ ಕೆಲವು ಕಡೆ ಇವತ್ತಿಗೂ ಟ್ರಾಫಿಕ್ ಸಮಸ್ಯೆ ದೊಡ್ಡ ತಲೆನೋವು.

ಗಂಟೆಗಂಟ್ಲೇ ರಸ್ತೆಯಲ್ಲೇ ನಿಂತು ಸ್ಲೋ ಮೂವಿಂಗ್ ನಲ್ಲಿ ವಾಹನ ಚಲಿಸೋದು ಕಾಮನ್ ಆಗಿಬಿಟ್ಟಿದೆ.

ಇದರೊಂದಿಗೆ ಬೆಂಗಳೂರು ವಾಹನ ಸವಾರರಿಗೆ ಶಾಕ್ ಕೊಡುವಂತಹ ಮತ್ತೊಂದು ಸಮೀಕ್ಷೆಯ ಸುದ್ದಿ ಹೊರಬಿದ್ದಿದೆ.

ಬೆಂಗಳೂರು ನಗರದ ಕೇಂದ್ರವು 2022 ರಲ್ಲಿ ವಿಶ್ವದ ಎರಡನೇ ಅತಿ ನಿಧಾನಗತಿಯ ವಾಹನ ಸಂಚಾರದ ನಗರವಾಗಿದೆ ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ನಗರದಲ್ಲಿ ರಸ್ತೆಯ ಮೂಲಕ 10 ಕಿಲೋಮೀಟರ್ ಪ್ರಯಾಣಿಸಲು ಸುಮಾರು ಅರ್ಧ ಗಂಟೆಯ ಸಮಯ ಬೇಕಾಗುತ್ತದೆ ಎಂದು ಜಿಯೋಲೊಕೇಶನ್ ಟೆಕ್ನಾಲಜೀಸ್‌ನ ತಜ್ಞ ಟಾಮ್‌ಟಾಮ್‌ನ ಇತ್ತೀಚಿನ ವರದಿಯು ತಿಳಿಸಿದೆ.

2022 ರಲ್ಲಿ ಬೆಂಗಳೂರು ಸಿಟಿ ಸೆಂಟರ್‌ನಲ್ಲಿ 10 ಕಿಮೀ ಕ್ರಮಿಸಲು 29 ನಿಮಿಷ 9 ಸೆಕೆಂಡ್‌ ತೆಗೆದುಕೊಂಡಿರುವುದಾಗಿ ಟಾಮ್‌ಟಾಮ್ ಬಿಡುಗಡೆ ಮಾಡಿರುವ ಸಂಶೋಧನೆಯಲ್ಲಿ ತಿಳಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...